ಕಮಲ ಪಾಳಯ ಸೇರಿದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್

ಕೇರಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಸಜೆ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ವ್ಯಕ್ತಿಗಳನ್ನುಕಮಲ ಪಾಳಯಕ್ಕೆ ಸ್ವಾಗತಿಸಿದ್ದಾರೆ.
ಮಾಧವನ್ ನಾಯರ್ ಬಿಜೆಪಿ ಸೇರ್ಪಡೆ
ಮಾಧವನ್ ನಾಯರ್ ಬಿಜೆಪಿ ಸೇರ್ಪಡೆ
Updated on
ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಸಜೆ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ವ್ಯಕ್ತಿಗಳನ್ನು ಕಮಲ ಪಾಳಯಕ್ಕೆ ಸ್ವಾಗತಿಸಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್, ಟ್ರಾವಂಕೂರು ದೇವಸ್ವಮ್ ಬೋರ್ಡ್ (ಟಿಡಿಬಿ) ಮಾಜಿ ಅಧ್ಯಕ್ಷ ತ್ತು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಜಿ. ರಾಮನ್ ನಾಯರ್ ಬಿಜೆಪಿ ಗೆ ಅಧಿಕೃತ ಸೇರ್ಪಎಯಾಗಿದ್ದಾರೆ.
"ನಾನು ಕೆಲ ಸಮಯದಿಂದ ಬಿಜೆಪಿಗಾಗಿ ಕೆಲಸ ಂಆಡುತ್ತಿದ್ದೆ. ಆದರೆ ಶನಿವಾರ ಅಮಿತ್ ಶಾನನ್ನನ್ನು ಔಪಚಾರಿಕವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ, ನಾನು ಭಾರತವನ್ನು ಅಭಿವೃದ್ಧಿಪಡಿಸುವ ಮೊಡಿಜಿಯವರ ತತ್ತ್ವದಲ್ಲಿ ಆಸಕ್ತಿ ಹೊಂದಿದ್ದೇನೆ ಹಾಗಾಗಿ ನಾನು ಬಿಜೆಪಿಯೊಂದಿಗೆ ಕೆಲಸ ಮಾಡಲು ಬಯಸುತ್ತೇನೆ" ಎಂದು ಮಾಧವನ್ ನಾಯರ್ ಹೇಳಿದ್ದಾರೆ.
ಮಹಿಳಾ ಆಯೋಗದ ಮಾಜಿ ಸದಸ್ಯೆ  ಡಾ. ಪ್ರಮೀಳಾ ದೇವಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕರಕುಲಂ ದಿವಾಕರನ್ ನಾಯರ್ ಮತ್ತು ಮಲಂಕರ ಚರ್ಚ್ ನ ಥಾಮಸ್ ಜಾನ್ ಬಿಜೆಪಿಗೆ ಸೇರಿದ ಇತರೆ ಮೂವರು ವ್ಯಕ್ತಿಗಳಾಗಿದ್ದಾರೆ.
ಶನಿವಾರ ರಾತ್ರಿ ತಿರುವನಂತಪುರಂನಲ್ಲಿನ ಹೋಟೆಲ್ ತಾಜ್ ವಿವಂತಾದಲ್ಲಿ ನಡೆದ ಸಮಾವೇಶವೊಂದರಲ್ಲಿ ಅವರುಗಳು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಶಬರಿಮಲೆ ವಿಚಾರದಲ್ಲಿ ಬಿಜೆಪಿ ನಿಲುವು ಸರಿಯಾಗಿದ್ದು ತಾವು ಪಕ್ಷದ ಕಾರ್ಯ್ಗಳಲ್ಲಿ ಕೈಜೋಡಿಸುತ್ತೇವೆ ಎಂದು ಜಿ.ರಾಮನ್ ನಾಯರ್ ಹೇಳಿದ್ದಾರೆ.
ಪಂಢಲಂ ಅರಮನೆ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷ ಪಿ.ಜಿ.ಸಾಸಿಕುಮಾರ್ ವರ್ಮಾ ಮತ್ತು ಶಬರಿಮಳದ ಪ್ರತಿಭಟನೆ ಭಾಗವಾಗಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಶಾ ಅವರನ್ನು ಭೇಟಿಯಾಗಿರುವುದಾಗಿ ವರದಿಯಾಗಿದೆ.
ಕಣ್ಣೂರಿನ ಬಿಜೆಪಿ ಜಿಲ್ಲಾ ಸಮಿತಿಯ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾ ದೇಶದಾದ್ಯಂತದ ಅಯ್ಯಪ್ಪ ಭಕ್ತರೊಡನೆ ಬಿಜೆಪಿ ನಿಲ್ಲ್ಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com