ಪಾಕಿಸ್ತಾನ-ಇಸ್ರೇಲ್ ನಡುವೆ ಹೇಳಿಕೊಳ್ಳುವಂತಹ ದ್ವಿಪಕ್ಷೀಯ ಸಂಬಂಧ ಇಲ್ಲ. ಹೀಗಿದ್ದರೂ ಇಸ್ರೇಲ್ ನ ವಿಮಾನವೊಂದು ಇಸ್ಲಾಮಾಬಾದ್ ನಲ್ಲಿ ಬಂದಿಳಿದು 10 ಗಂಟೆಗಳ ಕಾಲ ಸಂಪರ್ಕಕ್ಕೇ ಸಿಗದೇ ಇತ್ತು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಪಾಕಿಸ್ತಾನದಲಿ ಕೋಲಾಹಲ ಉಂಟಾಗುವಂತೆ ಮಾಡಿದೆ. ಪಾಕಿಸ್ತಾನದ ಸರ್ಕಾರ ಸ್ಪಷ್ಟನೆ ನೀಡಿದ ಬಳಿಕವೂ ಪತ್ರಿಕೆಯ ಸಂಪಾದಕ ತನ್ನ ವಾದವನ್ನು ಮುಂದುವರೆಸಿದ್ದಾರೆ.