200 ಜನಪ್ರತಿನಿಧಿಗಳು ಪಾನ್ ಸಂಖ್ಯೆಯನ್ನೇ ನೀಡಿಲ್ಲ

ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪಾನ್ ಸಂಖ್ಯೆ ನಮೂದಿಸಬೇಕು ಎಂಬ ಸೂಚನೆ ಇದ್ದರೂ 7 ಸಂಸದರು ಹಾಗೂ 199 ಶಾಸಕರು ಆ ವಿವರವನ್ನೇ ಕೊಟ್ಟಿಲ್ಲ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪಾನ್ ಸಂಖ್ಯೆ ನಮೂದಿಸಬೇಕು ಎಂಬ ಸೂಚನೆ ಇದ್ದರೂ 7 ಸಂಸದರು ಹಾಗೂ 199 ಶಾಸಕರು ಆ ವಿವರವನ್ನೇ ಕೊಟ್ಟಿಲ್ಲ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. 
ದೇಶದ 542 ಲೋಕಸಭಾ ಸದಸ್ಯರು ಹಾಗೂ 4086 ಶಾಸಕರ ವಿವರಗಳನ್ನು ವಿಶ್ಲೇಷನೆಗೆ ಒಳಪಡಿಸಿ ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ (ಎಡಿಎಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಎಂಬ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶವಿದೆ ಎಂದು ತಿಳಿದುಬಂದಿದೆ. 
ಪಾನ್ ಸಂಖ್ಯೆ ನೀಡದ ಶಾಸಕರ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಂದಿದೆ. ಆ ಪಕ್ಷದ 51 ಮಂದಿ ತಮ್ಮ ಪಾನ್ ವಿವರ ಬಹಿರಂಗಪಡಿಸಿಲ್ಲ. 42 ಶಾಸಕರೊಂದಿಗೆ ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, 25 ಶಾಸಕರೊಂದಿಗೆ ಸಿಪಿಎಂ ಮೂರನ್ ಸ್ಥಾನದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com