ಹೋರಾಟಗಾರರು ಕ್ರಿಮಿನಲ್'ಗಳೆಂದು ಬಿಂಬಿಸಲು ಪುಣೆ ಪೊಲೀಸರಿಂದ 'ಪತ್ರ' ಸೃಷ್ಟಿ: ಸುಧಾ ಭಾರಧ್ವಾಜ್

ನನ್ನನ್ನು ಹಾಗೂ ಹೋರಾಟಗಾರರನ್ನು ಕ್ರಿಮಿನಲ್ ಗಳೆಂದು ಬಿಂಬಿಸಲು ಪುಣೆ ಪೊಲೀಸರು ಪತ್ರವನ್ನು ಸೃಷ್ಟಿಸಿದ್ದಾರೆಂದು ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರು ಶನಿವಾರ ಆರೋಪ ಮಾಡಿದ್ದಾರೆ...
ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್
ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್
ನವದೆಹಲಿ: ನನ್ನನ್ನು ಹಾಗೂ ಹೋರಾಟಗಾರರನ್ನು ಕ್ರಿಮಿನಲ್ ಗಳೆಂದು ಬಿಂಬಿಸಲು ಪುಣೆ ಪೊಲೀಸರು ಪತ್ರವನ್ನು ಸೃಷ್ಟಿಸಿದ್ದಾರೆಂದು ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರು ಶನಿವಾರ ಆರೋಪ ಮಾಡಿದ್ದಾರೆ. 
ನಿನ್ನೆಯಯಷ್ಟೇ ಹೇಳಿಕೆ ನೀಡಿದ್ದ ಪುಣೆ ಪೊಲೀಸರು, ಎಡಪಂಥೀಯ ಹೋರಾಟಗಾರರಾದ ವರವರ ರಾವ್, ಸುಧಾ ಭಾರದ್ವಾಜ್ ಸೇರಿದಂದತೆ ಬಂಧಿತರು ನಿಷೇಧಿಕ ನಕ್ಸಲ್ ಗುಂಪುಗಳ ಜೊತೆಗೆ ಸಂಬಂಧ ಹೊಂದಿರುವುದಕ್ಕೆ ದಾಖಲೆಗಳಿವೆ ಎಂದು ಹೇಳಿದ್ದರು. ಅಲ್ಲದೆ, ಮಾವೋ ನಾಯಕ ಕಾಮ್ರೇಡ್ ಪ್ರಕಾಶ್ ಅವರಿಗೆ ಭಾರದ್ವಾಜ್ ಅವರು ಬರೆದಿದ್ದಾರೆಂಬ ಪತ್ರವೊಂದನ್ನು ಬಹಿರಂಗ ಪಡಿಸಿದ್ದರು. 
ಈ ಪತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭಾರದ್ವಾಜ್ ಅವರು, ನನ್ನನ್ನು ಹಾಗೂ ಹೋರಾಟಗಾರರನ್ನು ಕ್ರಿಮಿನಲ್ ಗಳೆಂದು ಬಿಂಬಿಸಲು ಪುಣೆ ಪೊಲೀಸರೇ ಈ ಪತ್ರವನ್ನು ಸೃಷ್ಟಿಸಿದ್ದಾರೆ. ಮಾನವ ಹಕ್ಕುಗಳ ವಕೀಲರು, ಕಾರ್ಯಕರ್ತರು ಹಾಗೂ ಸಂಘಟನೆಗಳ ಮೇಲೆ ಕಳಂಕವನ್ನು ತರಲು ಅವರ ಮೇಲೆ ದ್ವೇಷವನ್ನು ಹುಟ್ಟುಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. 
ಪ್ರಸ್ತುತ ಪುಣೆ ಪೊಲೀಸರು ಬಿಡುಗಡೆ ಮಾಡಿರುವ ಪತ್ರವು ಈ ಹಿಂದೆ ಪುಣೆ ನ್ಯಾಯಾಲಯಕ್ಕಾಗಲೀ ಅಥವಾ ಫರೀದಾಬಾದ್ ಸಿಜೆಎಂ ಗಳ ಮುಂದೆಯಾಗಲೀ ಪ್ರಸ್ತುತ ಪಡಿಸಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಪೊಲೀಸರು ಪತ್ರವನ್ನು ಬಿಡುಗಡೆ ಮಾಡಿದ್ದಾರೆಂದು ತಿಳಿಸಿದ್ದಾರೆ. 
ನಕ್ಸಲ್ ಜೊತೆಗೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಜೂನ್ ತಿಂಗಳಿನಲ್ಲಿ ಎಡಪಂಥೀಯ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. 
ಎಡಪಂಥೀಯ ಕಾರ್ಯಕರ್ತರು ನಕ್ಸಲ್ ಜೊತೆಗೆ ನಂಟು ಹೊಂದಿರುವ ಬಗ್ಗೆ ಬಲವಾದ ಸಾಕ್ಷಿಗಳು ಲಭ್ಯವಾಗಿದೆ ಎಂದು ನಿನ್ನೆಯಷ್ಟೇ ಪೊಲೀಸರು ಹೇಳಿಕೆ ನೀಡಿದ್ದರು. ಬಂಧಿತರಾದ ಎಡಪಂಥೀಯ ಕಾರ್ಯಕರ್ತರು ಹಾಗೂ ಭೂಗತ ನಕ್ಸಲರ ಮಧ್ಯೆ ವಿನಿಮಯವಾದ ಸಾವಿರಾರು ಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com