ರಾಹುಲ್ ಒಬ್ಬ 'ಗಟಾರದ ಹುಳು': ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ

ರಾಹುಲ್ ಒಬ್ಬ ಗಟಾರದ ಹುಳು, ಅವರು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಕಾಂಗ್ರೆಸ್....
ಅಶ್ವಿನಿ ಕುಮಾರ್ ಚೌಬೆ
ಅಶ್ವಿನಿ ಕುಮಾರ್ ಚೌಬೆ
ಪಟ್ನಾ: "ರಾಹುಲ್ ಒಬ್ಬ ಗಟಾರದ ಹುಳು, ಅವರು ಸ್ಕಿಜೋಫ್ರೇನಿಯಾದಿಂದ  ಬಳಲುತ್ತಿದ್ದಾರೆ." ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಟುವಾಗಿ ಟಿಕಿಸುವ ಮೂಲಕ ಸುದ್ದಿಯಾಗಿದ್ದಾರೆ.
ರಾಹುಲ್ "ನಾಲೆ ಕಿ ಕೀಡೆ" (ಚರಂಡಿಯ ಹುಳ) ಎಂದ ಚೌಬೆ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕಿಡಿ ಕಾರಿದ್ದಾರೆ.
"ನಮ್ಮ ಪ್ರಧಾನಿ ಆಕಾಶವಿದ್ದಂತೆ.  ಆದರೆ ಕಾಂಗ್ರೆಸ್ ಮುಖ್ಯಸ್ಥನಾಗಿದ್ದಾರೆ? ಅವರು ಗಟಾರದಲ್ಲಿರುವ ಕೀಟದಂತಿದ್ದಾರೆ" ಬಿಹಾರದ ಸಸರಾಂಪುರದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಅವರು ಈ ವಿವಾದಾತ್ಮಾ ಹೇಳಿಕೆ ನಿಡಿದ್ದಾರೆ.
ವಿವಾದಾಸ್ಪದ ಟೀಕೆಗಳಿಗೆ ಹೆಸರುವಾಸಿಯಾಗಿರುವ ಚೌಬೆ ಕಳೆದ ತಿಂಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಬಹುರೂಪಗಳನ್ನುಳಲವರು ಎಂದು ಕರೆದಿದ್ದರು.ಅಲ್ಲದೆ ಅವರಿಗೆ ಹಲವು ಮುಖಗಳಿದೆ ಆದರೆ ಅವರಿನ್ನೂ ಮಗು, ಅವರು ತಮ್ಮ ಪಮ್ಮ ಪಕ್ಷ ಕಾಂಗ್ರೆಸ್ ಅನ್ನು ಸಮಾಧಿ ಮಾಡಲಿದ್ದಾರೆ ಎಂದು ಟೀಕಿಸಿದ್ದರು.
ಇದಕ್ಕೆ ಹಿಂದೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು "ಪೂತನಿ" ಎಂದೂ, ರಾಹುಲ್ ಅವರನ್ನು "ವಿದೇಶೀ ಗಿ:ಳ್" ಎಂದೂ ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com