ತೆಲಂಗಾಣದ 9 ಸಾವಿರ ಸರ್ಕಾರಿ ನೌಕರರ ವೇತನ ಹೆಚ್ಚಳ ಘೋಷಿಸಿದ ಕೆಸಿಆರ್

ತೆಲಂಗಾಣದಲ್ಲಿ ಅವಧಿಪೂರ್ವ ವಿಧಾನಸಬೆ ಚುನಾವಣೆಯ ನಿರೀಕ್ಷೆಯ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್...
ಪ್ರಗತಿ ನಿವೇದನಾ ಸಭೆಯ ಚಿತ್ರ
ಪ್ರಗತಿ ನಿವೇದನಾ ಸಭೆಯ ಚಿತ್ರ
Updated on: 
ಹೈದರಾಬಾದ್: ತೆಲಂಗಾಣದಲ್ಲಿ ಅವಧಿಪೂರ್ವ ವಿಧಾನಸಬೆ ಚುನಾವಣೆಯ ನಿರೀಕ್ಷೆಯ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ರಾಜ್ಯ ಆರೋಗ್ಯ ಇಲಾಖೆಯ 9 ಸಾವಿರ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ.
ಇಂದು ಕೆಸಿಆರ್ ನೇತೃತ್ವದಲ್ಲಿ ನಡೆದ ಮಹತ್ವ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ 9 ಸಾವಿರ ನೌಕರರ ವೇತನ ಹೆಚ್ಚಳ, ಗುತ್ತಿಗೆ ಆಧಾರದ ವೈದ್ಯರ ವೇತನ 36 ಸಾವಿರದಿಂದ 40 ಸಾವಿರೆಕ ಏರಿಕೆ ಹಾಗೂ ಆಶಾ ಕಾರ್ಯಕರ್ತರ ವೇತನವನ್ನು 6 ಸಾವಿರ ರುಪಾಯಿಂದ 7,500 ರುಪಾಯಿಗೆ ಏರಿಕೆ ಸೇರಿದಂತೆ ಹಲವು ಮಹತ್ವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಿಎಂ ಕೆಸಿಆರ್ ಅವರು ಸಂಪುಟ ಸಭೆಯ ಬಳಿಕ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು ಸಂಜೆ ನಡೆಯುವ ಟಿಎಸ್ ಆರ್ ನ ಪ್ರಗತಿ ನಿವೇದನಾ ಸಮಾವೇಶಕ್ಕೆ ತೆರಳಿದ್ದಾರೆ.
ಕೆಸಿಆರ್ ಆರೋಗ್ಯ ಇಲಾಖೆಯ ನೌಕರರ ವೇತನ ಹೆಚ್ಚಳ ಹಾಗೂ ರೈತರ ಪರವಾದ, ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಿರುವುದು ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿ ವರ್ಷಾಂತ್ಯಕ್ಕೆ ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ಹೂಡುತ್ತಿರುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com