ಸರ್ಕಾರದಿಂದ ಜಿಎಸ್‏ಟಿ ಜಾಹೀರಾತುಗಳ ಮೇಲೆ ರು.132.38 ಕೋಟಿ ವೆಚ್ಚ!

ನೂತನ ಸರಕು- ಸೇವಾ ತೆರಿಗೆ ಜಿಎಸ್ ಟಿ ಜಾಹಿರಾತಿಗಾಗಿ ಕೇಂದ್ರಸರ್ಕಾರ ಬರೊಬ್ಬರಿ 132.38 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಆರ್ ಟಿಐಯಡಿ ಕೇಳಲಾದ ಪ್ರಶ್ನೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ರೀತಿಯ ಉತ್ತರ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನೂತನ ಸರಕು- ಸೇವಾ ತೆರಿಗೆ ಜಿಎಸ್ ಟಿ  ಜಾಹಿರಾತಿಗಾಗಿ ಕೇಂದ್ರಸರ್ಕಾರ ಬರೊಬ್ಬರಿ 132.38 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಆರ್ ಟಿಐಯಡಿ ಕೇಳಲಾದ ಪ್ರಶ್ನೆಗೆ  ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ರೀತಿಯ ಉತ್ತರ ನೀಡಿದೆ.

ಮುದ್ರಣ ಮಾಧ್ಯಮದಲ್ಲಿ  ಜಾಹೀರಾತು ಪ್ರಕಟಿಸಲು 1, 26, 93, 97. 121 ರೂ ವೆಚ್ಚ ಮಾಡಲಾಗಿದೆ. ಅಲ್ಲದೇ ವಿದ್ಯುನ್ಮಾನ ಮಾಧ್ಯಮದಲ್ಲಿನ ಜಾಹೀರಾತಿಗಾಗಿ ಕೂಡಾ ಅಷ್ಟೇ ಹಣ ವೆಚ್ಚ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಹೊರಾಂಗಣ ಜಾಹಿರಾತಿಗಾಗಿ 5. 44. 35, 502  ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಆಗಸ್ಟ್ 9 ರಂದು ಆರ್ ಟಿಐಯಡಿ ಕೇಳಲಾದ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ. ಜಿಎಸ್ ಟಿ ಕುರಿತು ಜನಜಾಗೃತಿ ಮೂಡಿಸಲು ಸ್ವಲ್ಪ ಹಣವನ್ನು ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.

ಜುಲೈ1, 2017 ರಂದು ಜಿಎಸ್ ಟಿ ಕಾಯ್ದೆ ಅನುಷ್ಠಾನಕ್ಕೆ ಬಂದಿತ್ತು.  ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರಸರ್ಕಾರ  ಅಪಾರ ಪ್ರಮಾಣದ ಹಣ ವೆಚ್ಚ ಮಾಡಿರುವುದು ತಿಳಿದುಬಂದಿದೆ.

ಜಿಎಸ್ ಟಿ ಅನುಷ್ಠಾನದ ದಿನ,  ಜಿಎಸ್ ಟಿ ಪ್ರಕ್ರಿಯೆ ಮತ್ತು ಜಿಎಸ್ ಟಿ ನಿಯಮಗಳ ಬಗ್ಗೆ ವಿವರಿಸಲು  ದೈನಂದಿನ ಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗುತಿತ್ತು.  ಅಲ್ಲದೇ ಈ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು  ಸರ್ಕಾರ ನೇಮಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com