ಎಂಎಲ್ ಎ ಪುತ್ರನಿಂದ ಜ್ಯೋತಿರಾದಿತ್ಯ ಸಿಂದಿಯಾಗೆ ಬೆದರಿಕೆ : ಕ್ಷಮೆ ಕೇಳಿದ ಬಿಜೆಪಿ ಶಾಸಕಿ

ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದಿಯಾಗೆ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬಿಜೆಪಿ ಶಾಸಕಿ ಪುತ್ರ ಪ್ರಿನ್ಸಿದೀಪ್ ಕಾತಿಕ್ ಬೆದರಿಕೆ ಹಾಕಿದ ನಂತರ ಶಾಸಕಿ ಉಮಾದೇವಿ ಕಾತಿಕ್ ಕ್ಷಮೆ ಕೋರಿದ್ದಾರೆ.
ಬಿಜೆಪಿ ಶಾಸಕಿ
ಬಿಜೆಪಿ ಶಾಸಕಿ
Updated on

ದಾಮ್ಹೊ : ಮಧ್ಯಪ್ರದೇಶದ ಕಾಂಗ್ರೆಸ್  ಸಂಸದ ಜ್ಯೋತಿರಾದಿತ್ಯ ಸಿಂದಿಯಾಗೆ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬಿಜೆಪಿ ಶಾಸಕಿ ಪುತ್ರ  ಪ್ರಿನ್ಸಿದೀಪ್ ಕಾತಿಕ್  ಬೆದರಿಕೆ ಹಾಕಿದ  ನಂತರ ಶಾಸಕಿ ಉಮಾದೇವಿ ಕಾತಿಕ್ ಕ್ಷಮೆ ಕೋರಿದ್ದಾರೆ.

ಪ್ರಿನ್ಸಿದೀಪ್ ಕಾತಿಕ್ ಹೇಳಿಕೆಗೆ  ಬಿಜೆಪಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಉಮಾ ದೇವಿ ಸ್ಪಷ್ಪಪಡಿಸಿದ್ದು, ಇದು ಉತ್ತಮ ನಡತೆ ಅಲ್ಲ. ತಾವೇ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿದ್ದಾರೆ. ಪ್ರಿನ್ಸ್ ದೀಪ್ ಕಾರ್ತಿಕ್ ಜೈಲಿಗೆ ಹೋಗುತ್ತಾನೆ. ನಾನೇ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಹಟ್ಟಾ ಪಟ್ಟಣಕ್ಕೆ ಸಿಂಧಿಯಾ ಕಾಲಿಟ್ಟರೆ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಪ್ರಿನ್ಸ್ ದೀಪ್  ಫೇಸ್ ಬುಕ್ ನಲ್ಲಿ  ಸ್ಟೇಟಸ್ ಹಾಕಿದ್ದ. ಸೆಪ್ಟೆಂಬರ್ 5 ರಂದು ಹಟ್ಟಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶ  ಹಿನ್ನೆಲೆಯಲ್ಲಿ ಸಿಂದಿಯಾ ವಿರುದ್ಧ ಬೆದರಿಕೆಯ ಹೇಳಿಕೆ ನೀಡಲಾಗಿತ್ತು.

ಈ ಮಧ್ಯೆ ಫೇಸ್ ಬುಕ್ ಸ್ಟೇಟಸ್ ಕುರಿತು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಸಿಂದಿಯಾ, ಈ ಬೆದರಿಕೆಯಿಂದ ಬಿಜೆಪಿಯ ನೈಜ ಮುಖ ಬಹಿರಂಗವಾಗಿದೆ . ಕಾಂಗ್ರೆಸ್ ಪಕ್ಷವನ್ನು ನಾಶಗೊಳಿಸಬೇಕೆಂಬುದು  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಹಾಗೂ ಬಿಜೆಪಿಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com