ವಾಯು ಸೇನೆಯ ಮಿಗ್ 27 ಯುದ್ಧ ವಿಮಾನ ಪತನ, ಪ್ರಾಣಾಪಾಯದಿಂದ ಪೈಲಟ್ ಪಾರು

ಭಾರತೀಯ ವಾಯುಸೇನೆಯ ಮಿಗ್ 27 ಯುದ್ಧ ವಿಮಾನ ರಾಜಸ್ಥಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಿಗ್ ವಿಮಾನ ಸ್ಫೋಟಗೊಂಡ ಸ್ಥಳ
ಮಿಗ್ ವಿಮಾನ ಸ್ಫೋಟಗೊಂಡ ಸ್ಥಳ
ಜೋಧ್ ಪುರ: ಭಾರತೀಯ ವಾಯುಸೇನೆಯ ಮಿಗ್ 27 ಯುದ್ಧ ವಿಮಾನ ರಾಜಸ್ಥಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಜೋದ್ ಪುರದಲ್ಲಿ ಈ ಘಟನೆ ನಡೆದಿದ್ದು, ಎಂದಿನ ಪ್ರಕ್ರಿಯೆಯಂತೆಯೇ ಜೋಧ್ ಪುರದಲ್ಲಿ ಪೈಲಟ್ ತನ್ನ ಮಿಗ್ 27 ಯುದ್ಧ ವಿಮಾನವನ್ನು ಟೇಕ್ ಆಫ್ ಮಾಡಿದ್ದು, ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳ ಅಂತರದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಕೂಡಲೇ ವಿಮಾನ ಭೂಮಿ ಅಪ್ಪಳಿಸುವ ಮುನ್ಸೂಚನೆ ದೊರೆತ ಪೈಲಟ್ ತುರ್ತು ನಿರ್ಗಮನದ ಮೂಲಕ ಯಶಸ್ವಿಯಾಗಿ ಹೊರಗೆ ಜಿಗಿದಿದ್ದಾನೆ. 
ಬಳಿಕ ಕೆಳಗೆ ಬಿದ್ದ ವಿಮಾನ ಸ್ಫೋಟಗೊಂಡಿದೆ. ವಿಮಾನದಲ್ಲಿದ್ದ ಇಂಧನದಿಂದಾಗಿ ಭಾರಿ  ಪ್ರಮಾಣದ ಬೆಂಕಿ ಹೊತ್ತಿಕೊಂಡು ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನ ಸ್ಫೋಟಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಭಾರಿ ಪ್ರಮಾಣದ ಸದ್ದು ಕೇಳಿದೆ. ಕೂಡಲೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ.
ಪ್ರಸ್ತುತ ಘಟನೆ ಸಂಬಂಧ ಸೇನೆ ಆಂತರಿಕ ತನಿಖೆಗೆ ಆದೇಶಿಸಿದೆ.
ಇನ್ನು ಮಿಗ್-27 ವಿಮಾನವನ್ನು 1980ರ ದಶಕದಲ್ಲಿ ಸೋವಿಯತ್ ರಾಷ್ಟ್ರದಿಂದ ಖರೀದಿಸಲಾಗಿತ್ತು.  ಇದು 1999ರ ಕಾರ್ಗಿಲ್ ಯುದ್ಧದಲ್ಲಿ ಕಾರ್ಯಾಚರಣೆ ನಡೆಸಿತ್ತು. ಕಳೆದ ಜುಲೈನಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಮಿಗ್-21 ವಿಮಾನ ಪತನಗೊಂಡ ಪರಿಣಾಮ ಪೈಲೆಟ್ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com