ಶೀಘ್ರದಲ್ಲೇ ಪೆಟ್ರೋಲ್ ದರ ರೂ.100ಕ್ಕೇರಲಿದೆ: ಆಂಧ್ರಪ್ರದೇಶ ಮುಖ್ಯಮಂತ್ರಿ

ಪೆಟ್ರೋಲ್ ಹಾಗೂ ಡೀಸೆಲೆ ದರ ಗಗನಕ್ಕೇರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್'ಡಿಎ ಸರ್ಕಾರದ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ...
ಆಂಧ್ರಪ್ರದೇಶ ಮುಖ್ಯಮಂತ್ರಿ
ಆಂಧ್ರಪ್ರದೇಶ ಮುಖ್ಯಮಂತ್ರಿ
ಅಮರಾವತಿ: ಪೆಟ್ರೋಲ್ ಹಾಗೂ ಡೀಸೆಲೆ ದರ ಗಗನಕ್ಕೇರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್'ಡಿಎ ಸರ್ಕಾರದ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿಯೇ ಪೆಟ್ರೋಲ್ ಬೆಲೆ ರೂ.100ಕ್ಕೆ ಏರಿಕೆಯಾಗಲಿದೆ. ಕೇವಲ ಪೆಟ್ರೋಲ್ ಅಷ್ಟೇ ಅಲ್ಲ ಡಾಲರ್ ಮುಂದೆ ರೂಪಾಯಿ ಮೌಲ್ಯ ಶೀಘ್ರದಲ್ಲಿಯೇ ಮತ್ತಷ್ಟು ಕುಸಿತ ಕಾಣಲಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ನೋಟು ನಿಷೇಧ ಕುರಿತಂತೆ ಆರ್'ಬಿಐ ವರದಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ನೋಟು ನಿಷೇಧವನ್ನು ಸೂಕ್ತವಾಗಿ ನಿಭಾಯಿಸಲು ಕೇಂದ್ರಕ್ಕೆ ಸಾಧ್ಯವಾಗುತ್ತಿಲ್ಲ. ನೋಟು ನಿಷೇಧದಿಂದ ನಾವು ಏನನ್ನು ಸಾಧಿಸಿದೆವು? ಬ್ಯಾಂಕುಗಳಲ್ಲಿನ ಪರಿಸ್ಥಿತಿಗಳು ಹೇಗಾಗಿದೆ? ದೊಡ್ಡ ಮೊತ್ತ ನೋಟುಗಳನ್ನು ಮೊದಲು ತೆಗೆದು ಹಾಕಬೇಕು. ರೂ.2000 ನೋಟಿನ ಅಗತ್ಯವಾದರೂ ಏನಿದೆ? ನೋಟು ನಿಷೇಧವನ್ನು ಮೋದಿ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಡಿಜಿಟಲ್ ಕರೆನ್ಸಿಗಳು ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದರೆ ನನಗೇನೂ ಸಮಸ್ಯೆಯಿಲ್ಲ. ಆದರೆ, ಡಿಜಿಟಲ್ ಹಾಗೂ ಸಾಮಾನ್ಯ ನೋಟುಗಳ ನಡುವೆ ಸೂಕ್ತ ರೀತಿಯ ಸಮತೋಲನವಿರಬೇಕು ಎಂದು ತಿಳಿಸಿದ್ದಾರೆ. 
ದೇಶದಲ್ಲಿ ಈಗಲೂ ನೋಟುಗಳ ಅಭಾವವಿದೆ. ಪ್ರಸ್ತುತ ಜಿಡಿಪಿ ಫಲಿತಾಂಶ ನಿಂತಿರುವುದು ಸಾಮಾನ್ಯ ಜನರ ಶಕ್ತಿಯಿಂದಲೇ ಹೊರತು ಎನ್'ಡಿಎ ಸರ್ಕಾರದ ಸಾಧನೆಗಳಿಂದಲ್ಲ. ಮೋದಿ ಶಿಸ್ತುಬದ್ಧವಾಗಿಲ್ಲ. ಎಟಿಎಂಗಳಲ್ಲಿ ಈಗಲೂ ನೋಟುಗಳ ಅಭಾವವಿದೆ. ಎನ್'ಡಿಎ ಅಧಿಕಾರಕ್ಕೆ ಬಂದ ಬಳಿಕ ದೇಶದ ಅಭಿವೃದ್ಧಿ ಕುಗ್ಗಿದೆ. ಕೇಂದ್ರ ಶಿಸ್ತುಬದ್ಧವಾಗಿದ್ದಿದ್ದೇ ಆದರೆ, ಭ್ರಷ್ಟಾಚಾರವೇಕೆ ಇನ್ನೂ ಇದೆ? ಪ್ರಾಮಾಣಿಕವಾಗಿ ಹಾಗೂ ಸತ್ಯತೆಯಿಂದ ಹಾಗೂ ಶಿಸ್ತುಬದ್ಧಾಗಿ ಮಾತನಾಡಲು ಮೋದಿ ಅರ್ಹವ್ಯಕ್ತಿಯಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com