ರಫೇಲ್ ಒಪ್ಪಂದ ಭ್ರಷ್ಟಾಚಾರದ ಮಹಾಮಾತೆ, ರಕ್ಷಣಾ ಸಚಿವೆ ಅದರ ಬಲಿಪಶು: ಕಾಂಗ್ರೆಸ್

ರಫೇಲ್ ಒಪ್ಪಂದ ಭ್ರಷ್ಟಾಚಾರದ ಮಹಾಮಾತೆ ಇದ್ದಂತೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದರ ಬಲಿಪಶುವಾಗಿದ್ದಾರೆಂದು ಕಾಂಗ್ರೆಸ್ ವಕ್ತಾರ ಶಕ್ತಿ ಸಿಂಗ್ ಗೊಹಿಲ್ ಅವರು ಹೇಳಿದ್ದಾರೆ...
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಕೊಟಾ: ರಫೇಲ್ ಒಪ್ಪಂದ ಭ್ರಷ್ಟಾಚಾರದ ಮಹಾಮಾತೆ ಇದ್ದಂತೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದರ ಬಲಿಪಶುವಾಗಿದ್ದಾರೆಂದು ಕಾಂಗ್ರೆಸ್ ವಕ್ತಾರ ಶಕ್ತಿ ಸಿಂಗ್ ಗೊಹಿಲ್ ಅವರು ಹೇಳಿದ್ದಾರೆ. 
ರಫೇಲ್ ಒಪ್ಪಂದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಫೇಲ್ ಒಪ್ಪಂದ ಮಹಾಮಾತೆ ಇದ್ದಂತೆ, ರಕ್ಷಣಾ ಸಚಿವೆ ಅದರ ಬಲಿಪಶುವಾಗಿದ್ದಾರೆ. ಕೇಂದ್ರದ ಈ ಭ್ರಷ್ಟಾಚಾರವನ್ನು ಕಾಂಗ್ರೆಸ್ ಕಾರ್ಯಕರ್ತರು ಇಡೀ ದೇಶದ ಮುಂದೆ ಬಹಿರಂಗಪಡಿಸಲಿದ್ದಾರೆಂದು ಹೇಳಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಫೇಲ್ ಯುದ್ಧ ವಿಮಾನಗಳ ಒಪ್ಪಂದ ರೂ.526 ರಿಂದ ರೂ.1,671 ಕೋಟಿಗಳಿಗೆ ಏರಿಕೆಯಾಗಿದ್ದು ಹೇಗೆ, ಇಡೀ ಒಪ್ಪಂದದಲ್ಲಿ ದೊಡ್ಡ ಭ್ರಷ್ಟಾಚಾರ ಅಡಗಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. 
ಮೋದಿ ಕೋಟಿಗಿಂತ ಕಡಿಮೆಗೆ ಒಪ್ಪಿಕೊಳ್ಳುವುದೇ ಇಲ್ಲ ಎಂಬ ಮಾತುಗಳಿವೆ. ಸುರಕ್ಷಿತ ಭ್ರಷ್ಟಾಚಾರಕ್ಕೆ ಮೋದಿ ಮಾಸ್ಟರ್ ಆಗಿದ್ದಾರೆ. ನಾಲ್ಕು ವರ್ಷಗಳಲ್ಲಿ ಮೂವರು ರಕ್ಷಣಾ ಸಚಿವರಿರುವುದು ಇದೇ ಮೊದಲು ಭ್ರಷ್ಟಾಚಾರ ಆರೋಪಗಳಿಂದ ಅರುಣ್ ಜೇಟ್ಲಿ ಹಾಗೂ ಮನೋಹರ್ ಪರಿಕ್ಕರ್ ಅವರು ತಪ್ಪಿಸಿಕೊಂಡರು, ಆದರೆ, ನಿರ್ಮಲಾ ಸೀತಾರಾಮನ್ ಬಲಿಪಶು ಆಗಿದ್ದಾರೆಂದು ತಿಳಿಸಿದ್ದಾರೆ. 
ಬೋಫೋರ್ಸ್ ಹಗರಣ ಪ್ರಕರಣ ಸಂಬಂಧ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಸಿತ್ತು. ಆದರೆ, ರಾಜೀವ್ ಗಾಂಧಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರಕಿರಲಿಲ್ಲ. ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುನ್ನ ಸಾಕಷ್ಟು ಸಮಿತಿಯ ಗುಂಪುಗಳು ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಭ್ರಷ್ಟಾಚಾರಕ್ಕೆ ಎಲ್ಲಿಯೂ ದಾರಿಮಾಡಿಕೊಟ್ಟಿರಲಿಲ್ಲ. ರಫೇಲ್ ಒಪ್ಪಂದದಲ್ಲಿ ಅಷ್ಟೊಂದು ವಿಶ್ವಾಸವಿರುವುದೇ ಆದರೆ, ಮೋದಿ ಸರ್ಕಾರವೇಕೆ ಸಂಸದೀಯ ಜಂಟಿ ಸಮಿತಿಯನ್ನು ರಚನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com