ಕೌಟುಂಬಿಕ ವೈಷಮ್ಯದ ಹಿನ್ನಲೆಯಲ್ಲಿ ತಾಯಿ ಸೂಚನೆ ಮೇರೆಗೆ ಮಲ ಸಹೋದರನೇ ತನ್ನ ಮಲ ಸಹೋದರಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಗೈದು, ಆಕೆಯ ಕಣ್ಣು ಕಿತ್ತು ಹಾಕಿ, ದೇಹವನ್ನು ಆ್ಯಸಿಡ್ ನಿಂದ ಸುಟ್ಟು ಹಾಕಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರ ಹಿರಿಯ ಪತ್ನಿ ಈ ದುಷ್ಕತ್ಯ ಮಾಡಿಸಿದ್ದು, ಆಕೆಯ ಪತಿ ಬೇರೊಬ್ಬ ಮಹಿಳೆಯೊಂದಿಗೆ 2ನೇ ವಿವಾಹವಾಗಿದ್ದ. ಅಲ್ಲದೆ ಆಕೆಗೆ 9 ವರ್ಷದ ಹೆಣ್ಣು ಮಗು ಕೂಡ ಇತ್ತು. ಇಬ್ಬರ ನಡುವೆಯೂ ಆಗಾಗ ಕೌಟುಂಬಿಕ ಕಲಹ ಏರ್ಪಡುತ್ತಿತ್ತು. ಇದರಿಂದ ಕ್ರೋಧಗೊಂಡಿದ್ದ ಮೊದಲ ಪತ್ನಿ ತನ್ನ 14 ವರ್ಷದ ಮಗ ಮತ್ತು ಆತನ ಸ್ನೇಹಿರಿಗೆ ಸೂಚನೆ ನೀಡಿ, ತನ್ನ ಗಂಡನ 2ನೇ ಪತ್ನಿಯ ಮಗಳನ್ನು ಅತ್ಯಾಚಾರ ಗೈದು ಕೊಲೆ ಮಾಡುವಂತೆ ಹೇಳಿದ್ದಾಳೆ.