ಏಷ್ಯನ್ ಗೇಮ್ಸ್ 2018: ಅಧಿಕೃತ ನಿವಾಸದಲ್ಲಿ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ

ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಪದಕ ಗೆದ್ದು ಸಾಧನೆ ಮಾಡಿರುವ ಕ್ರೀಡಾಪಟುಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸದಲ್ಲಿ..
ಏಷ್ಯನ್ ಗೇಮ್ಸ್ 2018: ಅಧಿಕೃತ ನಿವಾಸದಲ್ಲಿ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ
ಏಷ್ಯನ್ ಗೇಮ್ಸ್ 2018: ಅಧಿಕೃತ ನಿವಾಸದಲ್ಲಿ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ
Updated on
ನವದೆಹಲಿ: ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಪದಕ ಗೆದ್ದು ಸಾಧನೆ ಮಾಡಿರುವ ಕ್ರೀಡಾಪಟುಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸದಲ್ಲಿ ಮಂಗಳವಾರ ಸಂವಾದ ನಡೆಸಿದರು. 
ಪದಕ ವಿಜೇತರನ್ನು ಅಭಿನಂದಿಸಿದ ಮೋದಿಯವರು, ಏಷ್ಯನ್ ಗೇಮ್ಸ್ ನಲ್ಲಿ ಹಿಂದೆಂದಿಗಿಂತಲೂ ಅದ್ಭುತ ಪ್ರದರ್ಶನ ನೀಡಿ ಹೆಚ್ಚಿನ ಪದಕಗಳನ್ನು ತಂದುಕೊಟ್ಟಿರುವುದು ಶ್ಲಾಘನೆ ವ್ಯಕ್ತಪಡಿಸಿದರು. 
ಕ್ರೀಡಾಪಟುಗಳ ಸಾಧನೆ ಭಾರತದ ಘನತೆ ಮತ್ತು ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಹೇಳಿದ ಮೋದಿಯವರು, ಜನಪ್ರಿಯತೆ ಮತ್ತು ಶ್ಲಾಘನೆಗಳು ಕ್ರೀಡಾಪಟುಗಳ ಗಮನವನ್ನು ವಿಚಲಿತಗೊಳಿಸಬಾರದು, ಮೈದಾನದಲ್ಲೇ ಇದ್ದು ಮತ್ತಷ್ಟು ಸಾಧನೆ ಮಾಡಲು ಪರಿಶ್ರಮಪಡಬೇಕು ಎಂದು ಹೇಳಿದರು. 
ಸಣ್ಣ ಪಟ್ಟಣಗಳಿಂದ, ಗ್ರಾಮೀಣ ಪ್ರದೇಶಗಳಿಂದ, ಬಡತನದಿಂದ ಯುವ ಪ್ರತಿಭೆಗಳು ಉದಯಿಸಿ, ಪದಕ ಗೆಲ್ಲುವುದನ್ನು ನೋಡಲು ಸಂತೋಷವಾಗುತ್ತದೆ, ಹಳ್ಳಿಗಳಲ್ಲಿ ನಿಜವಾದ ಪ್ರತಿಭೆಗಳಿದ್ದು, ಅವುಗಳನ್ನು ಪೋಷಿಸುವ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com