ಶಿಕ್ಷಕರ ದಿನಾಚರಣೆ: ಗುರುಸಮಸ್ತರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ತತ್ವಜ್ಞಾನಿ, ವಿದ್ವಾಂಸ, ಭಾರತದ 2ನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುಸಮಸ್ತರಿಗೆ...
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ತತ್ವಜ್ಞಾನಿ, ವಿದ್ವಾಂಸ, ಭಾರತದ 2ನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುಸಮಸ್ತರಿಗೆ ಬುಧವಾರ ಶುಭಾಶಯಗಳನ್ನು ಕೋರಿದ್ದಾರೆ. 
ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್ ಅವರು, ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಡಾ.ಎಸ್.ರಾಧಾಕೃಷ್ನ್ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಹಾಗೂ ದೇಶದ ಸರ್ವ ಶಿಕ್ಷಕರಿಗೂ ಹೃದಯಪೂರ್ವಕ ಶುಭಾಶಯಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ. 
ದೇಶ ಕಟ್ಟಲು ನಮ್ಮ ಅತ್ಯುತ್ತಮ ಗುರುಗಳು ಸಹಾಯ ಹಾಗೂ ಮಾರ್ಗದರ್ಶನಗಳನ್ನು ಹೀಗೆಯೇ ಮುಂದುವರೆಸಲಿ. ಈ ಮೂಲಕ ಇಡೀ ವಿಶ್ವ ಬುದ್ಧಿವಂತಿಯಿಂದ ಹಾಗೂ ಶಾಂತಿ, ಸಾಮರಸ್ಯದಿಂದ ಇರಲಿ ಎಂದು ತಿಳಿಸಿದ್ದಾರೆ.
ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಟ್ವೀಟ್ ಮಾಡಿದ್ದು, ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಶಿಕ್ಷಕ ಸಮುದಾಯಕ್ಕೆ ಶುಭಾಶಯಗಳು. ಯುವ ಜನತೆಯ ಮನಸ್ಸು ತಿದ್ದಲು ಹಾಗೂ ದೇಶವನ್ನು ಕಟ್ಟಲು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಮಾಜಿ ರಾಷ್ಟ್ರಪತಿ ಮತ್ತು ವಿಶೇಷ ಗುರುಗಳಾದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಹಿನ್ನಲೆಯಲ್ಲಿ ಅವರಿಗೆ ತಲೆ ಬಾಗುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com