"ಬಿಹಾರದ ಮುಜಾಫರ್ ಪುರದಲ್ಲಿ ಭಾರತ್ ಬಂದ್ ಬೆಂಬಲಿಗರು ಮನಸೋ ಇಚ್ಛೆ ನನ್ನನ್ನು ಥಳಿಸಿದ್ದಾರೆ. ನನ್ನ ಕಾರ್ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುವುದಕ್ಕೂ ಮುನ್ನ ಪ್ರತಿಭಟನಾ ನಿರತರು ನನ್ನ ಜಾತಿಯನ್ನು ಕೇಳಿದರು. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರೂ ಸಹ ನನ್ನ ವಿರುದ್ಧ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ನಿಂದಿಸಿದರು" ಎಂದು ಕ್ಯಾಮರಾಗಳ ಮುಂದೆ ಪಪ್ಪು ಯಾದವ್ ಕಣ್ಣೀರಿಟ್ಟಿದ್ದಾರೆ.