ರಾಹುಲ್ ಗಾಂಧಿ ದೊಡ್ಡ ಬಫೂನ್: ಕೆಸಿಆರ್

ತೆಲಂಗಾಣ ಸರ್ಕಾರ ವಿಧಾನಸಭೆಯನ್ನು ವಿಸರ್ಜಿಸುವುದಕ್ಕೆ ನಿರ್ಣಯ ಕೈಗೊಂಡಿದ್ದು, ಸಿಎಂ ಚಂದ್ರಶೇಖರ್ ರಾವ್ ರಾಜ್ಯಪಾಲರನ್ನು ಭೇಟಿ ಮಾಡಿ ಸಚಿವ ಸಂಪುಟದ ನಿರ್ಣಯವನ್ನು ಹಸ್ತಾಂತರಿಸಿದ್ದಾರೆ.
ಕೆಸಿಆರ್
ಕೆಸಿಆರ್
ತೆಲಂಗಾಣ ಸರ್ಕಾರ ವಿಧಾನಸಭೆಯನ್ನು ವಿಸರ್ಜಿಸುವುದಕ್ಕೆ ನಿರ್ಣಯ ಕೈಗೊಂಡಿದ್ದು, ಸಿಎಂ ಚಂದ್ರಶೇಖರ್ ರಾವ್ ರಾಜ್ಯಪಾಲರನ್ನು ಭೇಟಿ ಮಾಡಿ ಸಚಿವ ಸಂಪುಟದ ನಿರ್ಣಯವನ್ನು ಹಸ್ತಾಂತರಿಸಿದ್ದಾರೆ. ರಾಜ್ಯಪಾಲರೂ ಒಪ್ಪಿಗೆ ನೀಡಿದ್ದು, ತೆಲಂಗಾಣ ವಿಧಾನಸಭೆ ವಿಸರ್ಜನೆಯಾಗಲಿದೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿರುವ ಕೆಸಿಆರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆಯೂ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣಾ ರಂಗಕ್ಕೆ ಬಂದು ಸವಾಲು ಎದುರಿಸಲಿ, ಜನರು ಪ್ರತ್ಯುತ್ತರ ನೀಡುತ್ತಾರೆ. ರಾಹುಲ್ ಗಾಂಧಿ ಏನೆಂಬುದು ಎಲ್ಲರಿಗೂ ಗೊತ್ತು, ರಾಹುಲ್ ಗಾಂಧಿ ದೇಶ ದೊಡ್ಡ ಬಫೂನ್. ಆತ ಸಂಸತ್ ನಲ್ಲಿ ಪ್ರಧಾನಿಯನ್ನು ಆಲಿಂಗನ ಮಾಡಿ, ಕಣ್ಣು ಹೊಡೆದಿದ್ದನ್ನು ಎಲ್ಲರೂ ಗಮನಿಸಿದ್ದಾರೆ. ರಾಹುಲ್ ಗಾಂಧಿ ಒಂಥರಾ ನಮಗೆ ಆಸ್ತಿ ಇದ್ದಂಗೆ ಅವರು ಇಲ್ಲಿಗೆ ಬಂದಷ್ಟೂ ನಾವು ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ ಎಂದು ಹೇಳಿದ್ದಾರೆ. 
ಇದೇ ವೇಳೆ ಬಿಜೆಪಿಯೊಂದಿಗೆ ಕೈ ಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆದಿರುವ ಟಿಆರ್ ಎಸ್ ನಾಯಕ ನಮ್ಮ ಪಕ್ಷ ಶೇ.100 ರಷ್ಟು ಸೆಕ್ಯುಲರ್ ಪಕ್ಷ ನಾವು ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com