ಹಿಂದಿಯಲ್ಲಿ 'ತಾಂತ್ರಿಕ ಪದ'ಗಳನ್ನು ಬಳಸಿದಿರಿ: ಪ್ರಧಾನಿ ಮೋದಿ

ಹಿಂದಿ ಭಾಷೆ ಮಾತನಾಡುವಾಗ 'ಸಂಕೀರ್ಣವಾದ ತಾಂತ್ರಿಕ ಪದ'ಗಳನ್ನು ಬಳಕೆ ಮಾಡುವ ಬದಲು, ದಿನನಿತ್ಯದ ಸಂಭಾಷಣೆಗಳ ಮೂಲಕ ಭಾಷೆಯನ್ನು ಪಸರಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸಲಹೆ ನೀಡಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಹಿಂದಿ ಭಾಷೆ ಮಾತನಾಡುವಾಗ 'ಸಂಕೀರ್ಣವಾದ ತಾಂತ್ರಿಕ ಪದ'ಗಳನ್ನು ಬಳಕೆ ಮಾಡುವ ಬದಲು, ದಿನನಿತ್ಯದ ಸಂಭಾಷಣೆಗಳ ಮೂಲಕ ಭಾಷೆಯನ್ನು ಪಸರಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸಲಹೆ ನೀಡಿದ್ದಾರೆ. 
ಕೇಂದ್ರೀಯ ಹಿಂದಿ ಸಮಿತಿಯ 31ನೇ ಸಭೆಯಲ್ಲಿ ಮಾತನಾಡಿರುವ ಅವರು, ಹಿಂದಿ ಭಾಷೆ ಕುರಿತ ಅಭಿಯಾನದಲ್ಲಿ ಶೈಕ್ಷಣಿಕ ಸಂಸ್ಥೆಗಳು ಸಹಾಯ ಮಾಡಲಿವೆ ಎಂದು ಹೇಳಿದ್ದಾರೆ. 
ಕಠಿಣವಾದ ತಾಂತ್ರಿಕ ಪದಗಳನ್ನು ಬಳಕೆ ಮಾಡುವ ಬದಲು ದಿನನಿತ್ಯ ಜೀವನದಲ್ಲಿ ಸಂಭಾಷಣೆಗಳನ್ನು ನಡೆಸುವ ಮೂಲಕ ಭಾಷೆಯನ್ನು ಹರಡಬೇಕು. ಇಂತಹ ಸಂದರ್ಭದಲ್ಲಿ ಕಠಿಣ ಶಬ್ಧಗಳ ಬಳಕೆಯನ್ನು ನಿಯಂತ್ರಿಸಬೇಕು. ಅಧಿಕಾರ ಉದ್ದೇಶಗಳಿಗಾಗಿ ಮಾತ್ರ ಬಳಕೆ ಮಾಡಬೇಕು. ಎಂದು ತಿಳಿಸಿದ್ದಾರೆ. 
ವಿಶ್ವದ ಇತರೆ ಸದಸ್ಯರನ್ನು ಸಂಪರ್ಕಿಸಲು ಹಿಂದಿ ಸೇರಿದಂತೆ ಇತರೆ ಭಾರತೀಯ ಭಾಷೆಗಳನ್ನೇ ಬಳಕೆ ಮಾಡುತ್ತೇವೆ. ಭಾರತೀಯರಿಗೆ ತಮಿಳು ಭಾಷೆ ಕುರಿತು ಹೆಮ್ಮೆಯಿದೆ. ತಮಿಳು ಅತ್ಯಂತ ಹಳೆಯ ಭಾಷಮೆಯಾಗಿದ್ದು, ದೇಶದ ಎಲ್ಲಾ ಭಾಷೆಗಳು ಹಿಂದಿಯನ್ನು ಶ್ರೀಮಂತಗೊಳಿಸಬಹುದು ಎಂದಿದ್ದಾರೆ. 
ಸಭೆಯಲ್ಲಿ ಅರುಣಾಚಲ ಪ್ರದೇಶ, ಹಿಮಾಚಲಪ್ರದೇಶ ಮತ್ತು ಗುಜರಾತ್ ರಾಜ್ಯ ಸೇರಿದಂತೆ ಇನ್ನಿತರೆ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com