ರೆಡ್ ಕಾರ್ನರ್ ನೋಟಿಸ್ ವಿರುದ್ಧ ಇಂಟರ್ ಪೊಲ್ ಗೆ ಮೆಹುಲ್ ಚೋಕ್ಸಿ ಮನವಿ

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ....
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ ತಲೆ ಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ತಮ್ಮ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ವಿರುದ್ಧ ಇಂಟರ್ ಪೊಲ್ ಮನವಿ ಸಲ್ಲಿಸಿದ್ದಾರೆ.
ಮೂಲಗಳು ಪ್ರಕಾರ, ರೆಡ್ ಕಾರ್ನರ್ ನೋಟಿಸ್ ಗೆ ಮೆಹುಲ್ ಚೋಕ್ಸಿ ಆಕ್ಷೇಪಕ್ಕೆ ಭಾರತೀಯ ತನಿಖೆ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಫ್ರಾನ್ಸ್ ನಲ್ಲಿರುವ ಇಂಟರ್ ಪೊಲ್ ಸಮಿತಿ ಅಕ್ಟೋಬರ್ ನಲ್ಲಿ ರೆಡ್ ಕಾರ್ನರ್ ನೋಟಿಸ್ ಬಗ್ಗೆ ನಿರ್ಧರಿಸಲಿದೆ.
ಆ್ಯಂಟಿಗುವಾ ಪೌರತ್ವ ಹೊಂದಿರುವ ಮೆಹುಲ್ ಚೋಕ್ಸಿಯನ್ನು ಹಸ್ತಾಂತರಿಸುವಂತೆ ಭಾರತ ಸೆಪ್ಟೆಂಬರ್ 1ರಂದು ಎರಡನೇ ಬಾರಿ ಆ್ಯಂಟಿಗುವಾ ಹಾಗೂ ಬರ್ಬುಡ ಸರ್ಕಾರಕ್ಕೆ ಮನವಿ ಮಾಡಿದೆ. 
ತಲೆಮರೆಸಿಕೊಂಡಿರುವ ಆರೋಪಿ ಚೋಕ್ಸಿಯನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಕಡ್ಡಾಯವೇನಲ್ಲ. ಆದರೆ ರೋಪಿಯನ್ನು ಪತ್ತೆ ಹಚ್ಚಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ವಿದೇಶಾಂಗ ಸಚಿವಾಲಯದ ಮೂಲಕ ಇಂಟರ್ ಪೊಲ್ ಗೆ ಮನವಿ ಮಾಡಿತ್ತು.
ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತಂತೆ ಕಾನೂನು ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಭಾರತದ ಕೋರಿಕೆ ಮೇರೆಗೆ ಹಸ್ತಾಂತರ ಕುರಿತಂತೆ ಆ್ಯಂಟಿಗೋ ಹಾಗೂ ಬರ್ಬುಡದ ಉನ್ನತಾಧಿಕಾರಿಗಳು ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ. ಕಾನೂನಿನ ವ್ಯಾಪ್ತಿಯಲ್ಲಿ ಮೆಹುಲ್ ಚೋಕ್ಸಿ ಯನ್ನು ಹಸ್ತಾಂತರ ಮಾಡುವ ಬಗ್ಗೆ ನಾವು ಕಾನೂನು ತಜ್ಞರ ಸಲಹೆ ಪಡೆಯಲಿದ್ದೇವೆ. ಒಂದು ವೇಳೆ ಹಸ್ತಾಂತರ ಮಾಡಲು ಅವಕಾಶವಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಂಟಿಗುವಾ ಮತ್ತು ಬರ್ಬುಡದ ಅರ್ಟಾನಿ ಜನರಲ್ ಸ್ಟೆಡ್ರಾಯ್ ಬೆನ್ಜಮಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com