ಇಸ್ರೇಲ್ ಮಾದರಿಯಲ್ಲಿ ಕಲ್ಲು ತೂರಾಟಗಾರರ ಹೆಡೆ ಮುರಿಕಟ್ಟಿದ ಭಾರತೀಯ ಸೇನೆ, ನಾಲ್ವರ ಬಂಧನ

ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ದೊಡ್ಡ ಆತಂಕ ತಂದೊಡ್ಡುತ್ತಿದ್ದ ಕಲ್ಲು ತೂರಾಟಗಾರರಿಗೆ ಪಾಠ ಕಲಿಸಲು ಭಾರತೀಯ ಸೇನೆ ಹೊಸದೊಂದು ಮಾಸ್ಟರ್ ಪ್ಲಾನ್ ಮಾಡಿದ್ದು, ಇದೀಗ ಆ ವಿಶೇಷ ಪ್ಲಾನ್ ನಿಂದಲೇ ನಾಲ್ವರು ಕಲ್ಲು ತೂರಾಟಗಾರರ ಬಂಧಿಸಿದೆ.
ಕಲ್ಲು ತೂರಾಟಗಾರರ ಸೋಗಿನಲ್ಲಿ ಕಲ್ಲು ತೂರಾಟಗಾರರ ನಾಯಕನ ಬಂಧನ
ಕಲ್ಲು ತೂರಾಟಗಾರರ ಸೋಗಿನಲ್ಲಿ ಕಲ್ಲು ತೂರಾಟಗಾರರ ನಾಯಕನ ಬಂಧನ
ಶ್ರೀನಗರ: ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ದೊಡ್ಡ ಆತಂಕ ತಂದೊಡ್ಡುತ್ತಿದ್ದ ಕಲ್ಲು ತೂರಾಟಗಾರರಿಗೆ ಪಾಠ ಕಲಿಸಲು ಭಾರತೀಯ ಸೇನೆ ಹೊಸದೊಂದು ಮಾಸ್ಟರ್ ಪ್ಲಾನ್ ಮಾಡಿದ್ದು, ಇದೀಗ ಆ ವಿಶೇಷ ಪ್ಲಾನ್ ನಿಂದಲೇ ನಾಲ್ವರು ಕಲ್ಲು ತೂರಾಟಗಾರರ ಬಂಧಿಸಿದೆ.
ಹೌದು.. ಈ ಹಿಂದೆ ಇಸ್ರೇಲ್ ನಲ್ಲಿ ಕಲ್ಲು ತೂರಾಟಗಾರರ ಮೇಲೆ ಇಸ್ರೇಲ್ ಸೇನೆ ನಡೆಸುವ ವಿಶೇಷ ಕಾರ್ಯಾಚರಣೆ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಭಾರತೀಯ ಸೇನೆ ಮತ್ತು ಕಾಶ್ಮೀರ ಪೊಲೀಸರು ಕಲ್ಲು ತೂರಾಟಗಾರರ ಹೆಡೆ ಮುರಿ ಕಟ್ಟಲು ಪಣ ತೊಟ್ಟು ನಿಂತಿದ್ದಾರೆ. ಕಳೆದ ವಾರ ಕಾಶ್ಮೀರದಲ್ಲಿ ನಡೆದ ಕಲ್ಲು ತೂರಾಟದ ವೇಳೆ ಸೇನೆ ಈ ಮಾಸ್ಟರ್ ಪ್ಲಾನ್ ಅನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ವೇಳೆ ನಾಲ್ವರು ಕಲ್ಲು ತೂರಾಟಗಾರರನ್ನು ಬಂಧಿಸಿದೆ.
ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲ ನುರಿತ ಅಧಿಕಾರಿಗಳು ಕಲ್ಲು ತೂರಾಟದಾರರ  ವೇಷ ಧರಿಸಿ ಕಲ್ಲು ತೂರಾಟಗಾರರ ಒಳಗೆ ಸೇರಿಕೊಂಡು ಅವರೂ ಕೂಡ ಸೇನೆಯತ್ತ ಮತ್ತು ಭದ್ರತಾ ಸಿಬ್ಬಂದಿಗಳತ್ತ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೆ ಸಮಯ ನೋಡಿಕೊಂಡು ನಾಲ್ಪರು ಕಲ್ಲು ತೂರಾಟಗಾರರ ಬಂಧಿಸಿದ್ದಾರೆ. ಕಲ್ಲು ತೂರಾಟಗಾರರ ನಡುವೆ ಇದ್ದ ಸೇನಾಧಿಕಾರಿಗಳನ್ನು ಗುರುತಿಸುವಲ್ಲಿ ವಿಫಲರಾದ ಕಲ್ಲು ತೂರಾಟಗಾರರ ನಾಯಕರು ಇದೀಗ ಸಿಕ್ಕಿ ಬಿದ್ದಿದ್ದು, ಸೇನೆ ಮತ್ತು ಕಾಶ್ಮೀರ ಪೊಲೀಸರಿಂದ ವಿಶೇಷ ಆತಿಥ್ಯ ಸ್ವೀಕರಿಸುತ್ತಿದ್ದಾರೆ.
ಸಿಆರ್‌ಪಿಎಫ್ ಯೋಧರ ಪಡೆ ಮೇಲೆ ಶುಕ್ರವಾರ 100 ಮಂದಿಯ ಗುಂಪು ಕಲ್ಲು ಏಕಾಏಕಿ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಕಲ್ಲು ತೂರಾಟಗಾರರನ್ನು ಬಂಧಿಸಲು ವಿಶೇಷ ಪ್ಲಾನ್ ರೂಪಿಸಿದ ಯೋಧರು ಅವರಂತೆ ವೇಷಧರಿಸಿ ಗುಂಪಿನಲ್ಲಿ ಸೇರಿದ್ದಾರೆ. ಬಳಿಕ ಪೊಲೀಸರೊಂದಿಗೆ ಯೋಧರ ಪಡೆ ದಾಳಿ ನಡೆಸಿದ್ದು, ಈ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಯೋಧರ ಪ್ಲಾನ್ ಅರಿಯಲು ವಿಫಲವಾದ ಕಲ್ಲು ತೂರಾಟಗಾರರು ಯುವಕರನ್ನು ವಶಕ್ಕೆ ಪಡೆಯುತ್ತಿದಂತೆ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೇ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಸ್ಥಳದಿಂದ ಮಂದಿ ಪರಾರಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸೈನಿಕರು ಸಿಕ್ಕಿಬಿದ್ದರೆ ಪ್ರಾಣಕ್ಕೇ ಆಪತ್ತು
ಇನ್ನು ಕಲ್ಲು ತೂರಾಟಗಾರರ ಹೆಡೆ ಮುರಿಕಟ್ಟುವ ಈ ಮಾಸ್ಟರ್ ಪ್ಲಾನ್ ಅನ್ನು ಸೇನೆ 2010ರಲ್ಲಿಯೇ ಮೊದಲ ಬಾರಿಗೆ ಬಳಕೆ ಮಾಡಿತ್ತು. ಆದರೆ ಒಂದು ವೇಳೆ ಕಲ್ಲು ತೂರಾಟಗಾರರ ಕೈಗೆ ವೇಷಧಾರಿ ಸೈನಿಕ ಸಿಕ್ಕಬಿದ್ದರೆ ಆತನ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಈ ಯೋಜನೆಯನ್ನು ಆ ಬಳಿಕ ಕೈ ಬಿಡಲಾಗಿತ್ತು. ಇದೀಗ ಮತ್ತೆ ಈ ಪ್ಲಾನ್ ಅನ್ನು ಜಾರಿಗೆ  ತರಲಾಗಿದ್ದು, ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಸದ್ಯ ಬಂಧಿಸಲಾಗಿರುವ ಆರೋಪಿಗಳಿಂದ ಆಟಿಕೆ ಬಂದೂಕು ವಶಕ್ಕೆ ಪಡೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com