ಭಾರತ್ ಬಂದ್ ವಿಫಲಗೊಂಡಿದೆ, ತೈಲ ಬೆಲೆ ಏರಿಕೆ ಸಂಕಷ್ಟ ತಾತ್ಕಾಲಿಕ: ರವಿಶಂಕರ್ ಪ್ರಸಾದ್

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಯಾವ ಕಾರಣದಿಂದ ಆಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ನಡೆಸುತ್ತಿರುವ ಭಾರತ ಬಂದ್ ವಿಫಲಗೊಂಡಿದೆ ಎಂದು ಬಿಜೆಪಿ ಸೋಮವಾರ...
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್
ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಯಾವ ಕಾರಣದಿಂದ ಆಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ನಡೆಸುತ್ತಿರುವ ಭಾರತ ಬಂದ್ ವಿಫಲಗೊಂಡಿದೆ ಎಂದು ಬಿಜೆಪಿ ಸೋಮವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಅಂತರಾಷ್ಟ್ರೀಯ ಬಿಕ್ಕಟ್ಟಿನಿಂದಾಗೂ ತೈಲ ಬೆಲೆ ಏರಿಕೆ ಕಂಡಿದ್ದು, ಈ ಸಂಕಷ್ಟ ತಾತ್ಕಾಲವಷ್ಟೇ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಯಾವ ಕಾರಣಕ್ಕೆ ಆಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ನಡೆಸುತ್ತಿರುವ ಭಾರತ್ ಬಂದ್ ವಿಫಲಗೊಂಡಿದೆ ಎಂದು ಹೇಳಿದ್ದಾರೆ. 
ಭಾರತ್ ಬಂದ್'ಗೆ ವಿರುದ್ಧವಾಗಿ ಭಾರತದ ಜನತೆ ಏಕಿದ್ದಾರೆ? ಏಕೆಂದರೆ, ಬೆಲೆ ಏರಿಕೆ ಯಾವ ಕಾರಣಕ್ಕೆ ಆಗಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಈ ಸಂಕಷ್ಟ ತಾತ್ಕಾಲಿಕವಷ್ಟೇ. ಭಾರತ ಸರ್ಕಾರದ ನಿಯಂತ್ರಣ ಸಾಮಾನ್ಯ ಭಾರತೀಯನ ಬಳಿಯಿದೆ ಎಂದು ತಿಳಿಸಿದ್ದಾರೆ. 
ಕೆಲ ಸಂಕಷ್ಟಗಳಿದ್ದರೂ ಜನರು ಬಂದ್'ಗೆ ಬೆಂಬಲ ನೀಡಿಲ್ಲ. ಭಾರತ್ ಬಂದ್ ವಿಫಲಗೊಂಡಿದೆ. ಹಿಂಸಾಚಾರ ಸೃಷ್ಟಿಸಿ ದೇಶದ ಜನತೆಯಲ್ಲಿ ಭೀತಿ ಹುಟ್ಟಿಸುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. 
ಪೆಟ್ರೋಲ್ ವಿಶ್ವದೆಲ್ಲೆಡೆ ಅಗತ್ಯವಿರುವ ವಸ್ತುವಾಗಿದ್ದು, ಲಭ್ಯವಿಲ್ಲದ ಹಾಗೂ ಸೀಮಿತ ಸರಬರಾಜಿನಿಂದಾಗಿ ಪೆಟ್ರೋಲ್ ಮೇಲೆ ಸಾಕಷ್ಟು ನಿಬಂಧನೆಗಳನ್ನು ಹೇರಲಾಗಿದೆ. ಹಾಗೆಂದು ಬೆಲೆ ಏರಿಕೆಯನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಬೆಲೆ ಏರಿಕೆಯನ್ನು ಇಳಿಕೆ ಮಾಡಲು ಎನ್'ಡಿಎ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಹಲವು ಬಾರಿ ಈ ಯತ್ನದಲ್ಲೂ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com