ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ರಾಜಸ್ಥಾನ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ

ತೈಲ ಬೆಲೆ ಏರಿಕೆ ವಿರೋಧಿಸಿದ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಬಿಸಿ ರಾಜಸ್ಥಾನ ಸರ್ಕಾರಕ್ಕೆ ಮುಟ್ಟಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತನ್ನ ಪಾಲಿನ ವ್ಯಾಟ್ ಕಡಿತಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜೈಪುರ: ತೈಲ ಬೆಲೆ ಏರಿಕೆ ವಿರೋಧಿಸಿದ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಬಿಸಿ ರಾಜಸ್ಥಾನ ಸರ್ಕಾರಕ್ಕೆ ಮುಟ್ಟಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತನ್ನ ಪಾಲಿನ ವ್ಯಾಟ್ ಕಡಿತಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಭಾನುವಾರ ರಾತ್ರಿ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ತೈಲೋತ್ಪನ್ನಗಳ ಮೇಲಿನ ವ್ಯಾಟ್ ನಲ್ಲಿ ಶೇ.4ರಷ್ಟು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದರಂತೆ ರಾಜಸ್ಥಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 2.50 ರೂ ಕಡಿತವಾಗುವ ಸಾಧ್ಯತೆ ಇದೆ. ಈ ಕಡಿತದಿಂದಾಗಿ 2,000 ಕೋಟಿ ಖರ್ಚು ಸರ್ಕಾರದ ಮೇಲೆ ಬೀಳಲಿದೆ ಎಂದು ರಾಜೆ ತಿಳಿಸಿದರು.
ರಾಜಸ್ಥಾನ ಮುಖ್ಯಮಂತ್ರಿಗಳ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಅಶೋಕ್ ಗೆಹ್ಲೋಟ್​  ದೇಶವ್ಯಾಪಿ ಕಾಂಗ್ರೆಸ್​ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ವಸುಂಧರ ರಾಜೇ ಬೆದರಿ ವ್ಯಾಟ್​ ಇಳಿಸಲು ಮುಂದಾಗಿದ್ದಾರೆ. ಅಲ್ಲದೇ ವ್ಯಾಟ್​ ಅನ್ನು ಶೇ. 4ರಷ್ಟು ಕಡಿತಗೊಳಿಸಿರುವುದು ಸಮಾಧಾನಕರವಲ್ಲ. ಗ್ಯಾಸ್​ ಸಿಲಿಂಡರ್​ ಮೇಲಿನ ತೆರಿಗೆಯನ್ನು ಕೂಡ ತೆಗೆಯಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com