ಎಥೆನಾಲ್ ಘಟಕಗಳು ಪ್ರಾರಂಭವಾದ ಬಳಿಕ ಪೆಟ್ರೋಲ್, ಡೀಸೆಲ್ 55-50 ರೂಪಾಯಿಗಳಿಗೆ ಲಭ್ಯ!

ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಜನತೆಗೆ ಹೊರೆಯಾಗುತ್ತಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶೀಘ್ರವೇ 5 ಎಥೆನಾಲ್ ಘಟಕಗಳು ಆರಂಭವಾಗಲಿವೆ.
ಎಥೆನಾಲ್ ಘಟಕಗಳು ಪ್ರಾರಂಭವಾದ ಬಳಿಕ ಪೆಟ್ರೋಲ್, ಡೀಸೆಲ್ 55-50 ರೂಪಾಯಿಗಳಿಗೆ ಲಭ್ಯ!
ಎಥೆನಾಲ್ ಘಟಕಗಳು ಪ್ರಾರಂಭವಾದ ಬಳಿಕ ಪೆಟ್ರೋಲ್, ಡೀಸೆಲ್ 55-50 ರೂಪಾಯಿಗಳಿಗೆ ಲಭ್ಯ!
Updated on: 
ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಜನತೆಗೆ ಹೊರೆಯಾಗುತ್ತಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶೀಘ್ರವೇ 5 ಎಥೆನಾಲ್ ಘಟಕಗಳು ಆರಂಭವಾಗಲಿವೆ. ಇದರಿಂದಾಗಿ ಪೆಟ್ರೋಲ್-ಡೀಸೆಲ್ ಮುಂದಿನ ದಿನಗಳಲ್ಲಿ 55-50 ರೂಪಾಯಿಗಳಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. 
ಎಥೆನಾಲ್ ಘಟಕಗಳು ಕಾರ್ಯಾರಂಭ ಮಾಡಿದ ಕೂಡಲೇ ಪೆಟ್ರೋಲ್-ಡೀಸೆಲ್ ದರಗಳು ಗಣನೀಯವಾಗಿ ಕಡಿಮೆಯಾಗಲಿದೆ. ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳಿಂದ ಘಟಕದಲ್ಲಿ ಇಂಧನ ಉತ್ಪತ್ತಿ ಮಾಡಲಾಗುತ್ತದೆ. ಭತ್ತ, ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ. ಚತ್ತೀಸ್ ಗಢ ಜೈವಿಕ ಇಂಧನವನು ಹೆಚ್ಚು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಗಡ್ಕರಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com