ಕೇರಳ ನನ್ ಮೇಲಿನ ಅತ್ಯಾಚಾರ: ನ್ಯಾಯಕ್ಕಾಗಿ ವ್ಯಾಟಿಕನ್ ಗೆ ಮೊರೆ

ಜಲಂಧರ್ ಬಿಷಪ್ ಫ್ರಾಂಕೊ ಮುಲಾಕಲ್ ಅತ್ಯಾಚಾರ ಆರೋಪಗಳ ಕುರಿತು ತಮಗೆ ನ್ಯಾಯ ದೊರಕಿಸಬೇಕೆಂದು ಕ್ರೈಸ್ತ ಧರಮದ ಪರಮೋಚ್ಚ ಪೋಪ್ ನೆಲೆಸಿದ ವ್ಯಾಟಿಕನ್ ಗೆ ಮೊರೆಯಿಟ್ಟಿದ್ದಾರೆ.
ಕೇರಳ ನನ್ ಮೇಲಿನ ಅತ್ಯಾಚಾರ: ನ್ಯಾಯಕ್ಕಾಗಿ ವ್ಯಾಟಿಕನ್ ಗೆ ಮೊರೆ
ಕೇರಳ ನನ್ ಮೇಲಿನ ಅತ್ಯಾಚಾರ: ನ್ಯಾಯಕ್ಕಾಗಿ ವ್ಯಾಟಿಕನ್ ಗೆ ಮೊರೆ
ತಿರುವನಂತಪುರಂ: ಜಲಂಧರ್ ಬಿಷಪ್ ಫ್ರಾಂಕೊ ಮುಲಾಕಲ್ ಅತ್ಯಾಚಾರ ಆರೋಪಗಳ ಕುರಿತು ತಮಗೆ ನ್ಯಾಯ ದೊರಕಿಸಬೇಕೆಂದು ಕ್ರೈಸ್ತ ಧರಮದ ಪರಮೋಚ್ಚ ಪೋಪ್ ನೆಲೆಸಿದ ವ್ಯಾಟಿಕನ್ ಗೆ ಮೊರೆಯಿಟ್ಟಿದ್ದಾರೆ.
ಸೆಪ್ಟಂಬರ್ 8ರಂದು ಅವರು ಬರೆದಿದ್ದ  ಏಳು ಪುಟಗಳ ಪತ್ರದಲ್ಲಿ ಅಪೋಸ್ಟೋಲಿಕ್ ನುನ್ಸಿಯೇಚರ್ - ಭಾರತದಲ್ಲಿನ ಪವಿತ್ರ ಸಮುದ್ರದ ಪ್ರತಿನಿಧಿ - ಬ್ರಹ್ಮಚಾರಿಣಿ (ನನ್) ತಾವು ಬಿಷಪ್ ರ ಎದುರು ತಲೆಬಾಗುವ ಅನಿವಾರ್ಯತೆ ಕುರಿತು ವಿವರಿಸಿದ್ದಾರೆ. ನನ್ ಗಳ ಮೇಲಿನ ಅತ್ಯಾಚಾರ ಕುರಿತು ಆಕೆ ಮಾತನಾಡಿದ ದಿನದಿಂದ ಆಕೆ ಎದುರಿಸುತ್ತಿರುವ ಬೆದರಿಕೆಗಳ ಕುರಿತು ಸಹ ಪತ್ರದಲ್ಲಿ ವಿವರಿಸಲಾಗಿದೆ.
ಚರ್ಚ್ ಅಧಿಕಾರಿಗಳ ನಿಷ್ಕ್ರಿಯತೆಯನ್ನು ಟೀಕಿಸಿರುವ ನನ್ "ಚರ್ಚ್ ನ ಅಧಿಕಾರಿಗಳು ಇಂತಹ ಕೃತ್ಯದ ಕುರಿತು ಮೌನ ತಾಳಿರುವುದರಿಂದ ಅಪರಾಧಗಳು ಹೆಚ್ಚುವುದಲ್ಲದೆ ಸಮಾಜದ ಜನರಿಗೆ ಚರ್ಚ್ ಗಳ ಮೇಲಿನ ವಿಶ್ವಾಸಾರ್ಹತೆ ಕುಸಿಯಲಿದೆ" ಎಂದಿದ್ದಾರೆ.
"ಭಾರತದಲ್ಲಿನ ಚರ್ಚ್ ಗಳ ಮಹಿಳೆಯರು ಇಂತಹಾ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಲಿದೆ. ತಮ್ಮ ಕ್ಯಾಥೊಲಿಕ್ ನಂಬಿಕೆಯನ್ನು ನಾಶಪಡಿಸಿಕೊಂಡ ಹೊರತಾಗಿಯೂ ಮಾನವೀಯ ನೆಲೆಯಲ್ಲಿ ಘನತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅವರು ಈ ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಬೇರೆ ಆಯ್ಕೆಗಳಿರುವುದಿಲ್ಲ."
 ಭಾರತದ ಇತರ ರೋಮನ್ ಕ್ಯಾಥೊಲಿಕ್ ಚರ್ಚ್ ನ  21 ಇತರ ಉನ್ನತ ಅಧಿಕಾರಿಗಳನ್ನು ಸಹ ನನ್ ಕಳಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನನ್, ಬಿಷಪ್ ಮುಲ್ಲಕಲ್ ಅವರು 2014 ಮತ್ತು 2016 ರ ನಡುವೆ ಅನೇಕ ಬಾರಿ ಅತ್ಯಾಚಾರ ನಡೆಸುವ ಪ್ರಯತ್ನದಲ್ಲಿ ತೊಡಗಿದ್ದರೆಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com