ಸರ್ಜಿಕಲ್ ಸ್ಟ್ರೈಕ್ ಸಂದರ್ಭ ಸೇನಾ ಪಡೆಗಳಿಗೆ ನೆರವಾಗಿದ್ದು ಚಿರತೆಯ ಮೂತ್ರ!

ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ರಾತ್ರೋರಾತ್ರಿ ನುಗ್ಗಿ ಭಯೋತ್ಪಾದಕ ಹುಟ್ಟಡಗಿಸಿ, ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು...
ಭಾರತೀಯ ಸೇನೆ
ಭಾರತೀಯ ಸೇನೆ
ಪುಣೆ: ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ರಾತ್ರೋರಾತ್ರಿ ನುಗ್ಗಿ ಭಯೋತ್ಪಾದಕ ಹುಟ್ಟಡಗಿಸಿ, ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಯೋಧರು ಚಿರತೆ ಮೂತ್ರ ಬಳಸಿದ್ದರಂತೆ. 
ಪಿಒಕೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವಾಗ ನಾಯಿಗಳಿಂದ ತಪ್ಪಿಸಿಕೊಳ್ಳಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಭಾರತೀಯ ಯೋಧರು ಬಳಸಿದ್ದರು ಎಂದು ನಿವೃತ್ತ ನಗ್ರೋಟ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ. 
2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಗಡಿಯಿಂದ 15 ಕಿ.ಮೀ ಒಳಗೆ ನುಗ್ಗಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಮಾತನಾಡಿದ ರಾಜೇಂದ್ರ ಅವರು, ತಾವು ನೌಶೆರದಲ್ಲಿ ಸೇವೆಯಲ್ಲಿರುವ ವೇಳೆ ಚಿರತೆಗಳು ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದವು. ಚಿರತೆಗಳಿಂದ ರಕ್ಷಿಸಿಕೊಳ್ಳಲು ನಾಯಿಗಳು ರಾತ್ರಿ ಹೊತ್ತು ಹೊರಗೆ ಬರುತ್ತಿರಲಿಲ್ಲ. ಸರ್ಜಿಕಲ್ ದಾಳಿ ವೇಳೆ ಯೋಧರು ಗ್ರಾಮ, ಹಳ್ಳಿಗಳ ನಡುವೆ ಸಾಗುವ ವೇಳೆ ನಾಯಿಗಳಿಂದ ದಾಳಿಯಾಗುವ ಸಂಭವವಿತ್ತು. ಇದನ್ನು ತಪ್ಪಿಸಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಲಾಗಿತ್ತು ಎಂದರು. 
ಅಂದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಯೋಜನೆ ಜಾರಿಗೊಳಿಸಲು ಒಂದು ವಾರದ ಗಡುವು ನೀಡಿದ್ದರು. ಯೋಧರಿಗೆ ಯೋಜನೆ ಬಗ್ಗೆ ತಿಳಿಸಲಾಗಿತ್ತು. ಆದರೆ ಯಾವ ದಿನ, ಸ್ಥಳದ ಕುರಿತು ಮಾಹಿತಿ ನೀಡಿರಲಿಲ್ಲ. ದಾಳಿಗೆ ತೆರಳುವ ಹಿಂದಿನ ದಿನ ದಾಳಿಯ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು ಎಂದರು. 
ಭಾರತೀಯರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನಲ್ಲಿ 29 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು ಎಂದು ರಾಜೇಂದ್ರ ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com