ಗಾಯದ ಮೇಲೆ ಬರೆ: ಪೆಟ್ರೋಲ್, ಡೀಸೆಲ್ ಬಳಿಕ ಎಥೆನಾಲ್ ಬೆಲೆ ಕೂಡ ಹೆಚ್ಚಳ!

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ನೈಸರ್ಗಿಕ ಇಂಧನಗಳತ್ತ ಜನ ಮುಖ ಮಾಡಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಎಥೆನಾಲ್ ಇಂಧನ ದರ ಏರಿಕೆ ಮಾಡುವ ಮೂಲಕ ಮತ್ತೆ ಜನಕೆಗೆ ಶಾಕ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ನೈಸರ್ಗಿಕ ಇಂಧನಗಳತ್ತ ಜನ ಮುಖ ಮಾಡಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಎಥೆನಾಲ್ ಇಂಧನ ದರ ಏರಿಕೆ ಮಾಡುವ ಮೂಲಕ ಮತ್ತೆ ಜನಕೆಗೆ ಶಾಕ್ ನೀಡಿದೆ.
ಮೂಲಗಳ ಪ್ರಕಾರ ಎಥೆನಾಲ್ ದರದಲ್ಲೂ ಏರಿಕೆಯಾಗಿದ್ದು, ಪ್ರತಿ ಲೀಟರ್ ಎಥೆನಾಲ್ ನ ದರದಲ್ಲಿ ಶೇ.25ರಷ್ಟು ದರ ಏರಿಕೆಯಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು. ಅದರಂತೆ ಪ್ರತೀ ಲೀಟರ್ ಎಥೆನಾಲ್ ದರವನ್ನು 52.43 ರೂ.ಗಳಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಲೀಟರ್ ಎಥೆನಾಲ್ ದರ 47.49 ರೂ. ಇತ್ತು.
ದರ ಏರಿಕೆ ಕುರಿತು ಸಭೆಯ ಬಳಿಕ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಬ್ಬು, ಗೋಧಿ, ಜೋಳ ಮತ್ತಿತರ ಬೆಳೆಗಳಿಂದ ಉತ್ಪಾದಿಸುವ ಎಥೆನಾಲ್ ಅನ್ನು ಪರಿಸರ ಸ್ನೇಹಿ ಇಂಧನವನ್ನಾಗಿ ವಾಹನಗಳಿಗೆ ಬಳಸಲಾಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ಪ್ರಯಾಣ ದರ ಕೂಡಾ ದುಬಾರಿಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com