ಲುಕ್ ಔಟ್ ಸರ್ಕ್ಯುಲರ್ ನಲ್ಲಿನ ಬದಲಾವಣೆ ತೀರ್ಪಿನಲ್ಲಿ ಆದ ದೋಷ; ಸಿಬಿಐ

ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ 2015ರಲ್ಲಿ ಹೊರಡಿಸಲಾಗಿದ್ದ ಲುಕ್ ಔಟ್ ಸರ್ಕ್ಯುಲರ್ ...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ 2015ರಲ್ಲಿ ಹೊರಡಿಸಲಾಗಿದ್ದ ಲುಕ್ ಔಟ್ ಸರ್ಕ್ಯುಲರ್ ನಲ್ಲಿನ ಬದಲಾವಣೆ ತೀರ್ಪಿನಲ್ಲಿ ಆದ ತಪ್ಪು ಎಂದು ಸಿಬಿಐ ಹೇಳಿದೆ.

2015ರ ತೀರ್ಪಿನಲ್ಲಿ ಬಂಧಿಸುವುದರ ಬದಲು ವಿಜಯ್ ಮಲ್ಯರ ಚಲನವಲನಗಳನ್ನು ಹೇಳಿದ್ದು ಅದು ತೀರ್ಪಿನಲ್ಲಿ ಆದ ದೋಷ ಯಾಕೆಂದರೆ ಅವರು ತನಿಖೆಗೆ ಸಹಕರಿಸುತ್ತಿದ್ದರು ಮತ್ತು ಅವರ ವಿರುದ್ಧ ಯಾವುದೇ ವಾರಂಟ್ ಹೊರಡಿಸಿರಲಿಲ್ಲ ಎಂದು ಸಿಬಿಐ ಹೇಳಿದೆ.

ಮೂರು ವರ್ಷಗಳ ನಂತರ ವಿವಾದ ಮತ್ತೆ ಗರಿಗೆದರಿದಾಗ 2015ರ ಅಕ್ಟೋಬರ್ 12ರಂದು ಮೊದಲ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದಾಗ ವಿಜಯ್ ಮಲ್ಯ ಅದಾಗಲೇ ವಿದೇಶದಲ್ಲಿದ್ದರು. ನಂತರ ವಲಸೆ ವಿಭಾಗದಲ್ಲಿ ಸಿಬಿಐ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರುವ ಬಗ್ಗೆ ಕೇಳಿತ್ತು. ಲುಕ್ ಔಟ್ ಸರ್ಕ್ಯುಲರ್ ಪ್ರಕಾರ ಮಲ್ಯರನ್ನು ಬಂಧಿಸುವ ಅಗತ್ಯವಿರಲಿಲ್ಲ. ಏಕೆಂದರೆ ಅವರು ಆಗ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಅವರ ವಿರುದ್ದ ವಾರಂಟ್ ಹೊರಡಿಸುವ ಅಗತ್ಯವಿರಲಿಲ್ಲ ಎಂದು ಸಿಬಿಐ ಹೇಳಿದೆ.

ಅವರ ಚಲನವಲನಗಳ ಬಗ್ಗೆ ಮಾತ್ರ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದ್ದಿತು ಎಂದು ಸಿಬಿಐ ಹೇಳಿದೆ. ಅಲ್ಲದೆ ಆ ಸಂದರ್ಭದಲ್ಲಿ ತನಿಖೆ ಆರಂಭಿಕ ಹಂತದಲ್ಲಿತ್ತು. ಮಲ್ಯ ಐಡಿಬಿಐ ಬ್ಯಾಂಕಿನಿಂದ 900 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದಿರುವ ಬಗ್ಗೆ ಸಿಬಿಐ ಮಾಹಿತಿ ಸಂಗ್ರಹಿಸುತ್ತಿತ್ತು.

ನಂತರ ನವೆಂಬರ್  2015ರ ಕೊನೆ ವಾರದಲ್ಲಿ ಸಿಬಿಐ ಹೊಸ ಲುಕ್ ಔಟ್ ಸರ್ಕ್ಯುಲರ್ ನ್ನು ವಿಜಯ್ ಮಲ್ಯ ವಿರುದ್ಧ ಹೊರಡಿಸಿದ್ದು, ದೇಶಾದ್ಯಂತ ಇರುವ ವಿಮಾನ ನಿಲ್ದಾಣ ಅಧಿಕಾರಿಗಳಲ್ಲಿ ಮಲ್ಯ ಅವರ ಚಲನವಲನಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು. ನವೆಂಬರ್ ನಲ್ಲಿ ಹೊರಡಿಸಿದ್ದ ಲುಕ್ ಔಟ್ ಸರ್ಕ್ಯುಲರ್ ಆ ಹಿಂದಿನ ಸರ್ಕ್ಯುಲರ್ ಗೆ ಬದಲಾವಣೆಯಾಗಿತ್ತು. ಮಲ್ಯ ದೇಶ ಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದರೆ ಅವರನ್ನು ಪತ್ತೆ ಹಚ್ಚಿ ಬಂಧಿಸುವುದು ಈ ನೊಟೀಸಿನ ಹಿಂದಿನ ಉದ್ದೇಶವಾಗಿತ್ತು.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ವಿಜಯ್ ಮಲ್ಯ ಅದೇ ವರ್ಷ ಅಕ್ಟೋಬರ್ ನಲ್ಲಿ ವಿದೇಶಕ್ಕೆ ಹೋಗಿ ನವೆಂಬರ್ ನಲ್ಲಿ ಮರಳಿದ್ದರು ಮತ್ತು ಅದೇ ವರ್ಷ ಡಿಸೆಂಬರ್ ನಲ್ಲಿ ಎರಡು ಬಾರಿ ವಿದೇಶಿ ಪ್ರವಾಸ ಕೈಗೊಂಡಿದ್ದರು ಹಾಗೂ ನಂತರ ಜನವರಿ 2016ರಲ್ಲಿ ಕೂಡ ವಿದೇಶ ಪ್ರವಾಸ ಮಾಡಿದ್ದರು.

ಈ ಮಧ್ಯೆ 2015ರಲ್ಲಿ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದರಿಂದ ವಿಜಯ್ ಮಲ್ಯ ಮೂರು ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಡಿಸೆಂಬರ್ 9ರಿಂದ 12ರವರೆಗೆ ಒಂದು ಬಾರಿ ದೆಹಲಿಯಲ್ಲಿ ಮತ್ತು ಮತ್ತೆರಡು ಸಲ ಮುಂಬೈಯಲ್ಲಿ.

ನೊಟೀಸ್ ನಲ್ಲಿ ಮಾಡಿರುವ ಬದಲಾವಣೆ ತೀರ್ಪಿನಲ್ಲಿ ಆದ ದೋಷವಾಗಿದ್ದು, ವಿಜಯ್ ಮಲ್ಯ ತನಿಖೆಗೆ ಸಹಕರಿಸುತ್ತಿದ್ದುದರಿಂದ ವಿದೇಶಕ್ಕೆ ಹೋಗುವುದನ್ನು ತಪ್ಪಿಸುವುದರಲ್ಲಿ ಯಾವುದೇ ಕಾರಣವಿರಲಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ 2, 2016ರಲ್ಲಿ ವಿಜಯ್ ಮಲ್ಯ ದೇಶ ಬಿಟ್ಟು ಹೋಗಿದ್ದು ಪ್ರಸ್ತುತ ಇಂಗ್ಲೆಂಡ್ ನಲ್ಲಿದ್ದು ಅಲ್ಲಿ ಗಡಿಪಾರು ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com