ದೇಶದ ರಕ್ಷಣಾ ಸನ್ನದ್ಧತೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಕೆಸೆರೆರೆಚಾಟ ಮಾಡಿರುವ ವಿಪಕ್ಷಗಳು ರಾಫೆಲ್ ಒಪ್ಪಂದದ ಕುರಿತು ವಿವರಣೆ ಪಡೆಯುವ ಅರ್ಹತೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಕಟುವಾಗಿ ಟೀಕಿಸಿದ್ದಾರೆ. ಚೀನಾ-ಪಾಕಿಸ್ತಾನ ಸ್ಲೀಟ್ ಫೈಟರ್ ಗಳನ್ನು ಆಮದು ಮಾಡಿಕೊಂಡು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಸಹ ರಾಫೆಲ್ ಜೆಟ್ ನ ಎರಡು ಸ್ಕ್ವಾಡ್ರನ್ ಗಳನ್ನು ತುರ್ತಾಗಿ ಖರೀದಿಸಲು ನಿರ್ಧಾರ ಮಾಡಿತ್ತು. ಇದರಲ್ಲಿ ವಿವರಣೆ ನೀಡುವಂಥದ್ದೇನಿದೆ? ಯುಪಿಎ ಸರ್ಕಾರದ ಅವಧಿಯಲ್ಲಿ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಒಪ್ಪಿಗೆ ಮಾಡಿಕೊಳ್ಳದೇ ಇರುವ ಅಂಶಗಳನ್ನಿಟ್ಟುಕೊಂಡು ವಿಪಕ್ಷಗಳು ದೇಶವನ್ನು ದಾರಿ ತಪ್ಪಿಸುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.