2019 ರ ಲೋಕಸಭಾ ಚುನಾವಣೆಗೆ ಹೈದರಾಬಾದ್ ನಿಂದ ಸ್ಪರ್ಧಿಸಿ: ಅಮಿತ್ ಶಾ ಗೆ ಓವೈಸಿ ಸವಾಲು

2019 ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾಗೆ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
2019 ರ ಲೋಕಸಭಾ ಚುನಾವಣೆಗೆ ಹೈದರಾಬಾದ್ ನಿಂದ ಸ್ಪರ್ಧಿಸಿ: ಅಮಿತ್ ಶಾ ಗೆ ಓವೈಸಿ ಸವಾಲು
2019 ರ ಲೋಕಸಭಾ ಚುನಾವಣೆಗೆ ಹೈದರಾಬಾದ್ ನಿಂದ ಸ್ಪರ್ಧಿಸಿ: ಅಮಿತ್ ಶಾ ಗೆ ಓವೈಸಿ ಸವಾಲು
Updated on: 
ಹೈದರಾಬಾದ್: 2019 ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾಗೆ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. 
ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, 2019 ರಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾ ಗೆ ಸವಾಲು ಹಾಕಿದ್ದಾರೆ. ಬಿಜೆಪಿಗೆ ತೆಲಂಗಾಣದಲ್ಲಿ ಈಗಿರುವ 4 ಸ್ಥಾನಗಳನ್ನೂ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ. 
ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಕೆಸಿಆರ್ ನಿರ್ಧಾರವನ್ನು ಪ್ರಶ್ನಿಸಿದ್ದ ಅಮಿತ್ ಶಾಗೆ 2002 ರಲ್ಲಿ ಗುಜರಾತ್ ಗಲಭೆ ನಂತರ ಅವಧಿಗೂ ಮುನ್ನ ನಡೆದಿದ್ದ ಚುನಾವಣೆಯನ್ನು ಓವೈಸಿ ನೆನಪಿಸಿದ್ದು, 2002 ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೂ ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿದ್ದರು ಎಂದು ಹೇಳಿದ್ದಾರೆ. 
ಲೋಕಸಭೆ-ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ನಿರ್ಧಾರವನ್ನು ಟಿಆರ್ ಎಸ್ ಬೆಂಬಲಿಸಿತ್ತಾದರೂ ಅವಧಿಗೂ ಮುನ್ನವೇ ಚುನಾವಣೆ ನಡೆಸುವುದರಿಂದ ಸಾರ್ವಜನಿಕರ ಹಣದ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಶಾ ಹೇಳಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಓವೈಸಿ 2002 ರಲ್ಲಿ ಗುಜರಾತ್ ನಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಸಿದ್ದಾಗ ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆ ಬಿದ್ದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com