ಕೇರಳ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ: ಹುದ್ದೆಯಿಂದ ಕೆಳಗಿಳಿದ ಬಿಷಪ್ ಫ್ರಾಂಕೊ; ವ್ಯಾಟಿಕನ್ ನಿಂದ ತನಿಖಾ ಸಮಿತಿ ರಚನೆ

ಕೇರಳ ಕ್ರೈಸ್ತ ಸಂನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ತಮ್ಮ ಆಡಳಿತಾತ್ಮಕ ಜವಾಬ್ದಾರಿಗಳನ್ನು ಬೇರೊಬ್ಬರಿಗೆ ವಹಿಸಿ, ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಕ್ರೈಸ್ತ ಸಂನ್ಯಾಸಿನಿಯರು
ಕ್ರೈಸ್ತ ಸಂನ್ಯಾಸಿನಿಯರು
ಕೇರಳ ಕ್ರೈಸ್ತ ಸಂನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ತಮ್ಮ ಆಡಳಿತಾತ್ಮಕ ಜವಾಬ್ದಾರಿಗಳನ್ನು ಬೇರೊಬ್ಬರಿಗೆ ವಹಿಸಿ, ಹುದ್ದೆಯಿಂದ ಕೆಳಗಿಳಿದಿದ್ದಾರೆ. 
ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಬಿಷಪ್ ಫ್ರಾಂಕೋ ನನ್ನ ಅನುಪಸ್ಥಿತಿಒಯಲ್ಲಿ ಮ್ಯಾಥ್ಯೂ ಕೊಕ್ಕಂಡಂ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.19 ರಂದು ತನಿಖಾ ತಂಡದ ಎದುರು ಹಾಜರಾಗಲು ಬಿಷಪ್ ಫ್ರಾಂಕೋ ಅವರಿಗೆ ಪೊಲೀಸರು ಸೂಚನೆ ನೀಡಿದ್ದರು. 
ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿ ಚರ್ಚ್ ನ ಪ್ರಮುಖ ಹುದ್ದೆಯಲ್ಲಿರುವುದಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿ, ಆತ ತನ್ನ ಅಧಿಕಾರದಿಂದ ಕೆಳಗಿಳಿಯಬೇಕೆಂಬ ಒತ್ತಡ ಹೆಚ್ಚಾಗಿತ್ತು. ಇದೇ ವೇಳೆ ಅತ್ಯಾಚಾರಕ್ಕೊಳಗಾಗಿರುವ ಕ್ರೈಸ್ತ ಸಂನ್ಯಾಸಿನಿ ಘಟನೆಯನ್ನು ವ್ಯಾಟಿಕನ್ ಗಮನಕ್ಕೆ ತಂದಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವ್ಯಾಟಿಕನ್ ಸಹ ಬಿಷಪ್ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಏಕ ಸದಸ್ಯ ಸಮಿತಿಯನ್ನು ರಚನೆ ಮಾಡಿದೆ. ವ್ಯಾಟೀಕನ್ ಗೆ ಭಾರತದ ಪ್ರತಿನಿಧಿಯೊಬ್ಬರು ತೆರಳಿದ್ದು, ಬಿಷಪ್ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com