ನವದೆಹಲಿ: ಮಸೀದಿ ಮತ್ತು ಮಂದಿರಗಳಿಗೆ ಪ್ರದಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ದೇವಾಲಯಕ್ಕೆ ತೆರಳಿದಾಗ ಪ್ರಧಾನಿ ಮೋದಿ ಮಸೀದಿಗೆ ಹೋಗುತ್ತಾರೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಬ್ಬರ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ದೇಶದ ಕಟ್ಟಡಗಳು ಮಂದಿರ ಮತ್ತು ಮಸೀದಿಯೊಂದಿಗೆ ನಡೆಯುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಮಸೀದಿ ಮಂದಿರಗಳನ್ನು ಸುತ್ತುವ ಬದಲು, ಶಾಲೆ, ಆಸ್ಪತ್ರೆ, ರಸ್ತೆ ನೀರು ಮತ್ತು ವಿದ್ಯುತ್ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ, ದೇವಾಲಯ ಮತ್ತು ಮಸೀದಿಗಳು 21 ನೇ ಶತಮಾನದ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳಾಗಿವೆ ಎಂದು ಲೇವಡಿ ಮಾಡಿದ್ದಾರೆ.
राहुल जी मंदिरों में घूम रहे हैं, मोदी जी आजकल मस्जिदों में घूम रहे हैं। राष्ट्र निर्माण मंदिर मस्जिद से नहीं बल्कि लोगों को स्कूल, अस्पताल, सड़कें, बिजली, पानी देने से बनेगा। 21वीं सदी के भारत के मंदिर और मस्जिद स्कूल, उच्च शिक्षण संस्थान और वर्ल्ड क्लास रिसर्च इन्स्टिट्यूट हैं। https://t.co/VkxP1GAe1t