ಜಮ್ಮು-ಕಾಶ್ಮೀರದ ಪಂಚಾಯತ್ ಚುನಾವಣೆಯನ್ನು 9 ಹಂತಗಳಲ್ಲಿ ನ.17 ರಿಂದ ನಡೆಯಲಿದೆ.
ರಾಜ್ಯದ ಸುಮಾರು 35,096 ಪಂಚಾಯತ್ ಕ್ಷೇತ್ರಗಳಿಗೆ 58 ಲಕ್ಷ ಜನರು ಮತದಾನ ಮಾಡಲಿದ್ದು, ಈ ಬಾರಿ ಮತದಾರರಿಂದ ಉತ್ತಮ ಸಹಭಾಗಿತ್ವ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಲೀನ್ ಕಬ್ರಾ ಹೇಳಿದ್ದಾರೆ. ಮೊದಲ ಹಂತದ ಚುನಾವಣೆಗೆ ಅ.23 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ನಡೆದ ದಿನವೇ ಅಥವಾ ಮರುದಿನ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಚುನಾವಣೆ ನಡೆಸುವುದಕ್ಕೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ನೆರೆ ರಾಜ್ಯಗಳಿಂದ ಹೆಚ್ಚುವರಿ ಬ್ಯಾಲೆಟ್ ಬಾಕ್ಸ್ ಗಳನ್ನು ತರಿಸಲಾಗುತ್ತದೆ, ಸರ್ಪಂಚ್ ಗಳು ನೇರವಾಗಿ ಆಯ್ಕೆಯಾಗಬೇಕಿರುವುದರಿಂದ ಎರಡು ರೀತಿಯ ಬ್ಯಾಲೆಟ್ ಪೇಪರ್ ಗಳನ್ನು ಹೊಂದಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ನವೆಂಬರ್ 17, 20, 24, 27, 29, ಡಿಸೆಂನರ್ 1, 4, 8, 11 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ವರೆಗೆ ಚುನಾವಣೆ ನಡೆಯಲಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.