

ನವದೆಹಲಿ: ಮಾಹಿತಿ ಹಕ್ಕು (ಆರ್ ಟಿಐ) ಕಾಯಿದೆ ಅಡಿಯಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಬಹಿರಂಗಪಡಿಸುವ ಕಡ್ಡಾಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶ ಯು ಯು ಲಲಿತ್ ನೇತೃತ್ವದ ನ್ಯಾಯಪೀಠ, ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯ ಹೊರಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಗೌಪ್ಯವಾಗಿ ಕಾಪಾಡಬೇಕೆಂದು ಈ ಹಿಂದೆ ನೀಡಿದ್ದ ಆದೇಶವನ್ನು ಮರು ಪರಿಶೀಲಿಸಲು ನಿರಾಕರಿಸಿತು.
ಕಳೆದ ಫೆಬ್ರವರಿಯಲ್ಲಿ ಹೊರಡಿಸಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನಿರಾಕರಿಸಿದ ನ್ಯಾಯಾಲಯ, ಹಿಂದಿನ ತೀರ್ಪಿಗೆ ಬದ್ಧವಾಯಿತು ಅಲ್ಲದೆ ಆರ್ ಟಿಇಯಡಿ ಅಭ್ಯರ್ಥಿಗಳ ಅಂಕಗಳನ್ನು ಬಹಿರಂಗಪಡಿಸುವಂತೆ ಸಲ್ಲಿಸಲಾಗಿದ್ದ ಎಲ್ಲಾ ರಿಟ್ ಅರ್ಜಿಗಳನ್ನು ವಜಾಗೊಳಿಸಿತು.
ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಪರೀಕ್ಷೆ ಬರೆದ ಅಂಕಗಳನ್ನು ಬಹಿರಂಗಪಡಿಸಿದರೆ ಮೌಲ್ಯಮಾಪನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಅಲ್ಲದೆ ಕೇಂದ್ರ ಲೋಕಸೇವಾ ಆಯೋಗದ ಘನತೆ ಮತ್ತು ವ್ಯವಸ್ಥೆಯ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ ಎಂದು ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
Advertisement