ಬಾಬರಿ ಮಸೀದಿ ಧ್ವಂಸ ಗಲಭೆ: ಹಿಂದೂ ಕುಟುಂಬ ತೊರೆದ ದೇಗುಲವನ್ನು 26 ವರ್ಷದಿಂದ ಕಾಪಾಡುತ್ತಿರುವ ಮುಸ್ಲಿಂರು!

1992ರಲ್ಲಿ ನಡೆದಿದ್ದ ಬಾಬರಿ ಮದೀಸಿ ಧ್ವಂಸ ಬಳಿಕ ಉದ್ಭವಿಸಿದ್ದ ಗಲಭೆಯ ಹಿನ್ನೆಲೆಯಲ್ಲಿ ಹಿಂದೂ ಕುಟುಂಬವೊಂದು ದೇವಸ್ತಾನವನ್ನು ಬಿಟ್ಟು ತೆರಳಿತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಜಫರ್‌ನಗರ: 1992ರಲ್ಲಿ ನಡೆದಿದ್ದ ಬಾಬರಿ ಮದೀಸಿ ಧ್ವಂಸ ಬಳಿಕ ಉದ್ಭವಿಸಿದ್ದ ಗಲಭೆಯ ಹಿನ್ನೆಲೆಯಲ್ಲಿ ಹಿಂದೂ ಕುಟುಂಬವೊಂದು ದೇವಸ್ತಾನವನ್ನು ಬಿಟ್ಟು ತೆರಳಿತ್ತು. 
ಮುಜಫರ್ ನಗರದಿಂದ ಒಂದು ಕಿ.ಮೀ ದೂರದಲ್ಲಿರುವ ಲದ್ದೇವಾಲ ಸಮೀಪದ ಕಿರಿದಾದ ಗಲ್ಲಿಯೊಂದರಲ್ಲಿ ಇದ್ದ ದೇಗುಲದಲ್ಲಿ ಹಿಂದೂ ಕುಟುಂಬವೊಂದು ಪೂಜಾ ಕೈಂಕರ್ಯ ನಡೆಸುತ್ತಿತ್ತು. ಗಲಭೆಯಿಂದ ಹೆದರಿದ ಕುಟುಂಬ ಅಲ್ಲಿದ ವಲಸೆ ಹೋಗಿತ್ತು.
ಹೀಗಾಗಿ ಕಳೆದ 26 ವರ್ಷಗಳಿಂದ ಆ ದೇವಾಲಯದ ನಿರ್ವಹಣೆ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಮುಸ್ಲಿಂರು ನಿಭಾಯಿಸುತ್ತಾ ಬಂದಿದ್ದಾರೆ. ಇನ್ನು ಪ್ರತಿದಿನ ದೇಗುಲವನ್ನು ಸ್ವಚ್ಛಗೊಳಿಸುವುದು. ಪ್ರತಿ ದೀಪಾವಳಿ ಸಮಯದಲ್ಲಿ ಬಣ್ಣ ಹೊಡೆಸುವುದು ಹಾಗೂ ಯಾವುದೇ ಪ್ರಾಣಿಗಳು ದೇಗುಲವನ್ನು ಪ್ರವೇಶಿಸದಂತೆ ರಕ್ಷಿಸುತ್ತಾ ಬಂದಿದ್ದಾರೆ. 
ಕೋಮುಗಲಭೆಯ ಕಾರಣಕ್ಕೆ ಹಿಂದೂ ಕುಟುಂಬವು ಇಲ್ಲಿಂದ ಹೋಗಿದ್ದನ್ನು 60 ವರ್ಷದ ಮೆಹರ್ ಬಾನಿ ಅಲಿ ನೆನಪಿಸಿಕೊಳ್ಳುತ್ತಾರೆ. ಜಿತೇಂದರ್ ಕುಮಾರ್ ಕುಟುಂಬ ಈ ಜಾಗ ತೊರೆಯುವುದನ್ನು ಆ ಒತ್ತಡದ ಸನ್ನಿವೇಶದಲ್ಲೂ ತಡೆಯಲು ಪ್ರಯತ್ನಿಸಿದ್ದೆ. ಅವರು ಸ್ವಲ್ಪ ಕಾಲ ಬಿಟ್ಟು ಬರುವುದಾಗಿ ವಾಗ್ದಾನ ಮಾಡಿ ಹೋಗಿದ್ದರು. ಆದರೆ ಇಲ್ಲಿಯವರೆಗೂ ಅವರು ಬಂದಿಲ್ಲ ಎಂದು ಅಲಿ ಹೇಳಿಕೊಂಡಿದ್ದಾರೆ. 
1970ರಲ್ಲಿ ಈ ದೇಗುಲ ನಿರ್ಮಿಸಲಾಗಿತ್ತು. ಇಲ್ಲಿ 35 ಮುಸ್ಲಿಂ ಕುಟುಂಬಗಳಿವೆ. ಸುತ್ತ 20 ಹಿಂದೂ ಕುಟುಂಬಗಳಿದ್ದವು. ಜಿತೇಂದರ್ ಕುಮಾರ್ ಕುಟುಂಬ ವಾಪಸಾಗಲಿ ಎಂದು ನಾವು ಬಯಸುತ್ತಿದ್ದು ದೇಗುಲವನ್ನು ಅವರ ವಶಕ್ಕೆ ನೀಡಲು ಇಚ್ಛಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com