ಹಾರ್ದಿಕ್‌ ಪಟೇಲ್‌ ಗೆ ನೀರು ಕೊಟ್ಟಿದ್ದು ಯಾರು? ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ!

ಗಾಂಧಿನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿರುವುದು ಈಗಾ ಭಾರಿ ...
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
ಅಹಮದಾಬಾದ್: ಗಾಂಧಿನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿರುವುದು ಈಗಾ ಭಾರಿ ವಿವಾದಕ್ಕೆ ಕಾರಣವಾಗಿದೆ. 
ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಇತ್ತಿಚೆಗೆ 19 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರಿಗೆ 'ನಿರಶನವನ್ನು ಕೊನೆಗೊಳಿಸಲು ಯಾವ ನಾಯಕ ಅವರಿಗೆ ನೀರು ಕೊಟ್ಟರು' ಎಂಬ ಪ್ರಶ್ನೆಯನ್ನು ಕೇಳಲಾಗಿದೆ.
ಹಾರ್ದಿಕ್‌ ಪಟೇಲ್‌ ಉಪವಾಸ ಸತ್ಯಾಗ್ರಹ ಮುಗಿಸಲು ನೀರು ಕೊಟ್ಟ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಆಯ್ಕೆಗಳಿದ್ದವು. ಅವೆಂದರೆ 1. ಶರದ್‌ ಯಾದವ್‌, 2. ಶತ್ರುಘ್ನ ಸಿನ್ಹಾ, 3. ಲಾಲು ಪ್ರಸಾದ್‌ ಯಾದವ್‌, 4. ವಿಜಯ್‌ ರೂಪಾಣಿ. ಸರಿಯಾದ ಉತ್ತರ ಜೆಡಿಯು ನ ಶರದ್‌ ಯಾದವ್‌ ಎಂಬುದಾಗಿತ್ತು. 
25 ವರ್ಷದ ಹಾರ್ದಿಕ್‌ ಅವರು ಕಳೆದ ಆಗಸ್ಟ್‌ 25ರಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com