ಗುಜರಾತ್: ಬುಲೆಟ್ ಟ್ರೈನ್ ಯೋಜನೆ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಾವಿರಾರು ರೈತರು !

ಕೇಂದ್ರಸರ್ಕಾರದ ಮಹತ್ವಕಾಂಕ್ಷೆಯ ಮುಂಬೈ- ಅಹಮದಾಬಾದ್ ನಡುವಿನ ಬುಲೆಟ್ ಟ್ರೋನ್ ಯೋಜನೆ ವಿರೋಧಿಸಿ ಸಾವಿರಕ್ಕೂ ಹೆಚ್ಚು ರೈತರು ಇಂದು ಗುಜರಾತ್ ಹೈಕೋರ್ಟ್ ನಲ್ಲಿ ಅಪಿಢವಿಟ್ ಸಲ್ಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್ : ಕೇಂದ್ರಸರ್ಕಾರದ ಮಹತ್ವಕಾಂಕ್ಷೆಯ ಮುಂಬೈ- ಅಹಮದಾಬಾದ್ ನಡುವಿನ ಬುಲೆಟ್ ಟ್ರೋನ್ ಯೋಜನೆ  ವಿರೋಧಿಸಿ  ಸಾವಿರಕ್ಕೂ ಹೆಚ್ಚು ರೈತರು ಇಂದು ಗುಜರಾತ್ ಹೈಕೋರ್ಟ್ ನಲ್ಲಿ ಅಪಿಢವಿಟ್ ಸಲ್ಲಿಸಿದ್ದಾರೆ.

ವೇಗದ ರೈಲು ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಐದು ಅರ್ಜಿಗಳನ್ನು  ಮುಖ್ಯ  ನ್ಯಾಯಾಧೀಶ ಆರ್ ಸುಭಾಶ್ ರೆಡ್ಡಿ ಹಾಗೂ ನ್ಯಾಯಾಧೀಶ ವಿ.ಎಂ. ಪಂಚೊಲಿ ಅವರಿದ್ದ  ಪೀಠ ಇಂದು ವಿಚಾರಣೆ ನಡೆಸಿತು.

ಇದಲ್ಲದೆ,  ಕೇಂದ್ರಸರ್ಕಾರದ ಮಹತ್ವಾಕಾಂಕ್ಷೆಯ 1. 10 ಲಕ್ಷ ಕೋಟಿ ರೂ ವೆಚ್ಚದ ಯೋಜನೆಯಿಂದ ಅನೇಕ ಬೆಳೆಗಾರರು ತೊಂದರೆಗೊಳಗಾಬೇಕಾಗುತ್ತದೆ. ಆದ್ದರಿಂದ ಈ ಯೋಜನೆ ಕೈಗೆತ್ತಿಕೊಳ್ಳಬಾರದೆಂದು  ಎಂದು 1 ಸಾವಿರ ರೈತರು  ಪ್ರತ್ಯೇಕವಾಗಿ ಅಪಿಢವಿಟ್ ಸಲ್ಲಿಸಿದ್ದಾರೆ.

 ಬುಲೆಟ್ ಟ್ರೈನ್ ಮಾರ್ಗ ಸಾಗುವ  ಗುಜರಾತಿನ ಕೆಲವು ಜಿಲ್ಲೆಗಳ  ರೈತರ ಮೇಲೆ ಈ ಯೋಜನೆಯಿಂದ ಪರಿಣಾಮ ಬೀರಲಿದ್ದು, ಯೋಜನೆಗಾಗಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರೆದೆಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ಬುಲೆಟ್ ಟ್ರೈನ್ ಗಾಗಿ ಸೆಪ್ಟೆಂಬರ್ 2015ರಲ್ಲಿ ಜಪಾನ್ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಗುಜರಾತ್ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘಿಸಿದೆ. ನ್ಯಾಯಾಲಯ ಅಥವಾ ಯಾವುದೇ ರೀತಿಯಿಂದಲೂ ಸಮಾಲೋಚನೆ ನಡೆಸದೆ  ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕಳೆದ ನಾಲ್ಕು ವಾರಗಳಿಂದಲೂ ವಿಚಾರಣೆ ಪೂರ್ಣಗೊಳಿಸುವಲ್ಲಿ ಹೈಕೋರ್ಟ್  ವಿಫಲವಾಗಿದ್ದು, ನಾಳೆ ಸುಪ್ರೀಂಕೋರ್ಟ್ ನಲ್ಲಿ ತುರ್ತು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಪರ ವಕೀಲ ಆನಂದ್ ಯಾಗ್ ನಿಕ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com