ಹನಿ ಟ್ರ್ಯಾಪ್: ಉತ್ತರ ಪ್ರದೇಶ ಎಟಿಎಸ್ ನಿಂದ ಬಿಎಸ್ಎಫ್ ಯೋಧನ ಬಂಧನ

ಪಾಕಿಸ್ತಾನದ ಐಎಸ್ಐ ಏಜೆಂಟ್ ಗಳಿಗೆ ಪ್ರಮುಖ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಬಿಎಸ್ಎಫ್ ಯೋಧರೊಬ್ಬರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಖನೌ: ಪಾಕಿಸ್ತಾನದ ಐಎಸ್ಐ ಏಜೆಂಟ್ ಗಳಿಗೆ ಪ್ರಮುಖ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಬಿಎಸ್ಎಫ್ ಯೋಧರೊಬ್ಬರನ್ನು ಉತ್ತರ ಪ್ರದೇಶ ಉಗ್ರ ನಿಗ್ರಹ ದಳ(ಎಟಿಎಸ್) ಬಂಧಿಸಿದೆ ಎಂದು ಬುಧವಾರ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಒ ಪಿ ಸಿಂಗ್ ಅವರು ಹೇಳಿದ್ದಾರೆ.
ಮಧ್ಯ ಪ್ರದೇಶದ ರೆವಾ ಮೂಲದ ಬಿಎಸ್ ಎಫ್ ಅಚ್ಯುತಾನಂದನ್ ಮಿಶ್ರಾ ಅವರನ್ನು ಹನಿ ಟ್ರ್ಯಾಪಿಂಗ್‌ ಮಾಡಲಾಗಿದ್ದು, ರಕ್ಷಣಾ ವರದಿಗಾರ್ತಿ ಎಂದು ಹೇಳಿಕೊಂಡು ಬಂದ ಯುವತಿಯೊಂದಿಗೆ, ಸೇನಾ ಕಾರ್ಯಾಚರಣೆ, ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಅಕಾಡೆಮಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಒ ಪಿ ಸಿಂಗ್ ಅವರು ತಿಳಿಸಿದ್ದಾರೆ.
ಮಿಶ್ರಾ ಅವರನ್ನು ಎಟಿಸಿ ಅಧಿಕಾರಿಗಳು ಹಾಗೂ ಬಿಎಸ್ಎಫ್ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರಹಸ್ಯ ಮಾಹಿತಿ ಹಂಚಿಕೊಂಡಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮಿಶ್ರಾ ಅವರು 2006ರಲ್ಲಿ ಗಡಿ ಭದ್ರತಾ ಪಡೆ(ಬಿಎಸ್ ಎಫ್) ಸೇರಿದ್ದು, 2016ರಲ್ಲಿ ಮಹಿಳೆಯೊಬ್ಬರು ಅವರ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಬಿಎಸ್ ಎಫ್ ಕ್ಯಾಂಪ್ ಫೋಟೋ ಸೇರಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಮಿಶ್ರಾ ಅವರು ಮಹಿಳೆಯೊಂದಿಗೆ ವಾಟ್ಸ್ ಆಪ್ ಚಾಟ್ ಮಾಡಿದ್ದಲ್ಲದೆ ತನ್ನ ಫೋನ್ ನಲ್ಲಿ ಪಾಕಿಸ್ತಾನಿ ದೋಸ್ಟ್ ಎಂಬ ಹೆಸರಿನಲ್ಲಿ ಆಕೆಯ ನಂಬರ್ ಸೇವ್ ಮಾಡಿಕೊಂಡಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com