ಆರ್ ಎಸ್‍ಎಸ್ ಅಲ್ಪಸಂಖ್ಯಾತರನ್ನು ತುಚ್ಛೀಕರಿಸುತ್ತದೆ ಎಂಬ ಕಾಂಗ್ರೆಸ್ ಟೀಕೆಗೆ ಎದಿರೇಟು ನೀಡಿದ ಭಾಗ್ವತ್, 'ಸಂಘವು ವೈವಿಧ್ಯತೆಯನ್ನು ಪ್ರೀತಿಸುತ್ತದೆಯೇ ಹೊರತು ದ್ವೇಷಿಸುವುದಿಲ್ಲ. ವಿಶ್ವ ಸಹೋದರತೆ ಹಿಂದುತ್ವದ ಪರಂಪರೆಯಾಗಿದ್ದು, ಈ ಭ್ರಾತೃತ್ವವು ವೈವಿಧ್ಯತೆಯಲ್ಲಿ ಏಕತೆಯನ್ನು ಕಲ್ಪಿಸುತ್ತದೆ. ಹೀಗಾಗಿ ಸಂಘವು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯಲು ಖುಷಿ ಪಡುತ್ತದೆ. ಇಡೀ ಸಮಾಜವನ್ನು ಒಟ್ಟುಗೂಡಿಸುವುದೇ ಸಂಘದ ಗುರಿಯಾಗಿದೆಯೇ ಹೊರತು ಸಂಘಕ್ಕೆ ಯಾವುದೇ ಪಕ್ಷ ಮುಖ್ಯವಲ್ಲ. ರಾಷ್ಟ್ರದ ಹಿತಾಸಕ್ತಿಯೊಂದೇ ಜೀವಾಳ. ಆರ್ ಎಸ್‍ಎಸ್ ಹುಟ್ಟಿದ ಬಳಿಕ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದೆ. ಸಂಘ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅಥವಾ ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ. ಸಂಘದ ಕಾರ್ಯಕರ್ತರು ಯಾವುದೇ ಒಂದು ನಿರ್ದಿಷ್ಟ ಪಕ್ಷದ ಜತೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದೂ ತಿಳಿಸಿದರು.