ಮೋದಿ ಸರ್ಕಾರ ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯದ ಆಟಕ್ಕೆ ಬಳಸಿಕೊಳ್ಳುತ್ತಿದೆ: ಕಾಂಗ್ರೆಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಖ್ ವಿಷಯವನ್ನು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯದ ಆಟಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಪ್ರಧಾನ ಮಂತ್ರಿ  ನರೇಂದ್ರ ಮೋದಿ  ನೇತೃತ್ವದ ಸರ್ಕಾರ ತ್ರಿವಳಿ ತಲಾಖ್ ವಿಷಯವನ್ನು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವುದಕ್ಕಿಂತಲೂ ಹೆಚ್ಚಾಗಿ  ರಾಜಕೀಯದ ಆಟಕ್ಕೆ ಬಳಸಿಕೊಳ್ಳುತ್ತಿದೆ ಎಂದು  ಕಾಂಗ್ರೆಸ್ ಆರೋಪಿಸಿದೆ.

ವಿಚ್ಚೇದನಕ್ಕೊಳಗಾದ ಮಹಿಳೆ ಹಾಗೂ ಮಕ್ಕಳಿಗೆ ಪರಿಹಾರ ನೀಡದ ವ್ಯಕ್ತಿಯ ಆಸ್ತಿ  ವಶಪಡಿಸಿಕೊಂಡು ಪರಿಹಾರ ನೀಡುವಂತಹ  ಕಾಂಗ್ರೆಸ್ ಕೋರಿಕೆಗೆ  ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜಿವಾಲಾ ಹೇಳಿದ್ದಾರೆ.

 ತ್ರಿವಳಿ ತಲಾಖ್ ಅಸಂವಿಧಾನಿಕವಾಗಿದ್ದು, ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ರದ್ದುಪಡಿಸಿದೆ.ಸುಪ್ರೀಂಕೋರ್ಟ್ ಇದನ್ನು ನಿಷೇಧಿಸಿದ ಬಳಿಕ ಕೇಂದ್ರಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com