ಗಿರ್ ಅರಣ್ಯದಲ್ಲಿ 11 ಸಿಂಹಗಳ ಸಾವಿಗೆ ಶ್ವಾಸಕೋಶ ಸೋಂಕು ಕಾರಣ

ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದ ಸಿಂಹಗಳ ಕ್ರೂರ ಕಾದಾಟದಲ್ಲಿ 11 ಸಿಂಹಗಳು ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜುನಾಗರ್: ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದ ಸಿಂಹಗಳ ಕ್ರೂರ ಕಾದಾಟದಲ್ಲಿ 11 ಸಿಂಹಗಳು ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ, ಈ 11 ಸಿಂಹಗಳ ಸಾವಿಗೆ ನಿರ್ದಿಷ್ಟ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಗುಜರಾತ್ ಸರ್ಕಾರ ತನಿಖೆಗೆ ಸೂಚಿಸಿತ್ತು.
ಸತ್ತಿರುವ ಹಲವು ಸಿಂಹಗಳು ಶ್ವಾಸಕೋಶದ ಸೋಂಕಿನಿಂದಾಗಿ ಸಾವನ್ನಪ್ಪಿವೆ ಎಂದು ಗಿರ್ ಅರಣ್ಯ ಅಧಿಕಾರಿ ಹಿತೇಶ್ ವಂಜಾ ಹೇಳಿದ್ದಾರೆ. ಶ್ವಾಸಕೋಶದ ಸೋಂಕು ತಗುಲಿರುವುದು ಕೆಲವು ಸಿಂಹಗಳಲ್ಲಿ ಕಂಡು ಬಂದಿದೆ, ಹಾಗೂ ಅವುಗಳ ಜೊತೆಯಲ್ಲಿರುವ ಸಿಂಹಗಳಿಗೂ ಸೋಂಕು ಹರಡಿದೆ ಹೀಗಾಗಿ ಸಿಂಹಗಳ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಉಳಿದ ಸಿಂಹಗಳ ಸುರಕ್ಷತೆಗಾಗಿ  ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ, ಅಗತ್ಯ ವಿರುವ ವೈದ್ಯಕೀಯ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದ್ದಾರೆ. 
ಉಳಿದ ಸಿಂಹಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಲಸಿಕೆ ನೀಡಲಾಗುತ್ತದೆ ಎಂದು ಆ ಮೂಲಕ ಕಾಯಿಲೆ ನಿಯಂತ್ರಣ ತರಲಾಗುತ್ತದೆ ಎಂದು ಹೇಳಿದ್ದಾರೆ.ಪ್ರಸ್ತುತ ದೊರೆತ ಸಿಂಹಗಳ ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com