ನಾವೇನೂ 'ನರಭಕ್ಷಕ ಹುಲಿ'ಗಳಲ್ಲ: ಸುಪ್ರೀಂ ಕೋರ್ಟ್

ನಾವೇನೂ ನರಭಕ್ಷಕ ಹುಲಿಗಳಲ್ಲ ಒಂದು ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿ ವಿಚಾರಣೆಯಲ್ಲಿದೆ ಎಂದ ಮಾತ್ರಕ್ಕೆ ಸರ್ಕಾರಗಳು ಹೆದರಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ನಾವೇನೂ ನರಭಕ್ಷಕ ಹುಲಿಗಳಲ್ಲ ಒಂದು ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿ ವಿಚಾರಣೆಯಲ್ಲಿದೆ ಎಂದ ಮಾತ್ರಕ್ಕೆ ಸರ್ಕಾರಗಳು ಹೆದರಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
"ನಾವೇನು ನರಭಕ್ಷಕ ಹುಲಿಗಳೋ, ಇನ್ನೊಂದೋ ಆಗಿಲ್ಲ, ಸರ್ಕಾರ ನಮಗೆ ಹೆದರಬಾರದು" ಎಂದು ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ  ಅವರನ್ನೊಳಗೊಂಡ ಪೀಠ ಹೇಳಿದೆ.
ಖಾಸಗಿ ಸಂಸ್ಥೆಯೊದರ ಪರ ವಕೀಲರಾದ ಮುಕುಲ್ ರೋಹ್ಟಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಾ ಆಂಧ್ರ ಪ್ರದೇಶದ ಸಂಸ್ಥೆಯೊಂದು ಅಕ್ರಮ ಗಣಿಗಾರಿಕೆ ನಡೆಸಿದೆ ಎಂದು ಆರೋಪಿಸಿಸರ್ಕಾರದ ಮೇಲೆ ಅರ್ಜಿದಾರರು ಒತ್ತಡ ಹಾಕುತ್ತಿದ್ದಾರೆ ಎಂದಾಗ ನ್ಯಾಯಪೀಠವು ಈ ಮೇಲಿನಂತೆ ಹೇಳಿಕೆ ನೀಡಿದೆ.
ಟೈಮ್ಸ್ ಗ್ರೂಪ್ ನಿಂದ ಗ್ಣಿಗಾರಿಕೆ ಅಮಾನತುಗೊಳಿಸಿ ಆಂಧ್ರ ಪ್ರದೇಶ ಸರ್ಕಾರ ಹೊರಡಿಸಿದ ಆದೇಶದ ದಾಖಲೆ ಪ್ರಸ್ತುತ ಪಡಿಸಿ,ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ಆಗ ಸಂಸ್ಥೆ ಪರ ವಕೀಲರಾದ ರೋಹ್ಟಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಇದೆ ಎನ್ನುವ ಕಾರಣಕ್ಕಷ್ಟೇ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ, ಇದೊಂದು ಅಕ್ರಮ ಗಣಿಗಾರಿಕೆ ಪ್ರಕರಣವಲ್ಲ ಎಂದು ಪ್ರತಿವಾದ ಹೂಡಿದ್ದಾರೆ.
ಅರ್ಜಿದಾರ ಇಎಎಸ್ ಶರ್ಮಾ ಪರ ವಕೀಲರಾದ ಪ್ರಶಾಂತ್ ಭೂಷಣ್ ಸರ್ಕಾರ ಕೇವಲ ಪರವಾನಗಿ ಅಮಾನತುಗೊಳಿಸಿದೆ.ಆದರೆ ಸಂಸ್ಥೆಯ ಲೈಸನ್ಸ್ ರದ್ದುಪಡಿಸಿ ಅದರಿಂದ ಹಣ ವಸೂಲಿ ಮಾಡಿಕೊಳ್ಳಬೇಕು ಎಂದು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹ್ಟಗಿ ಸರ್ಕಾರದ ಮೇಲೆ ಒತ್ತಡ ಹೇರಲು ಈ ಅರ್ಜಿ ಹಾಕಲಾಗಿದೆ, ಇಲ್ಲಿ ಅಕ್ರಮ ಗಣಿಗಾರಿಕೆ ಎನ್ನಲು ಯಾವ ಆಧಾರವಿಲ್ಲ ಎಂದು ವಾದಿಸಿದ್ದಾರೆ.
ಇದಕ್ಕೆ ಹಿಂದೆ ಸರ್ವೋಚ್ಚ ನ್ಯಾಯಾಲಯ ಆಂಧ್ರದಲ್ಲಿ ಖಾಸಗಿ ಸಂಸ್ಥೆ ಅಕ್ರಮ ಗಣಿಗಾರಿಕೆ ನಡೆಸಿದೆ ಎನ್ನುವ ವಿಚಾರ ಕುರಿತಂತೆ ಎಸ್ ಐಟಿ ಅಥವಾ ಸಿಬಿಐನಿಂದ ತನಿಖೆ ಆಗಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಯಿಸುವಂತೆ ಕೇಂದ್ರ, ಆಂಧ್ರ ಸರ್ಕಾರ ಹಾಗೂ ಟೈಮ್ಸ್ ಗ್ರೂಪ್ ಸಂಸ್ಥೆಗೆ ನ್ಯಾಯಾಲಯ ಸೂಚನೆ ನಿಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com