ಜಮ್ಮು-ಕಾಶ್ಮೀರ: ಲೆಫ್ಟಿನೆಂಟ್'ಆಗಿ ಭಾರತೀಯ ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ
ಜಮ್ಮು-ಕಾಶ್ಮೀರ: ಲೆಫ್ಟಿನೆಂಟ್'ಆಗಿ ಭಾರತೀಯ ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ

ಜಮ್ಮು-ಕಾಶ್ಮೀರ: ಲೆಫ್ಟಿನೆಂಟ್'ಆಗಿ ಭಾರತೀಯ ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ

ದೇಶಕ್ಕಾಗಿ ಪ್ರಾಣತೆತ್ತ ಯೋಧನ ಪತ್ನಿಯೊಬ್ಬರು ಇದೀಗ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ಹುತಾತ್ಮತ ಯೋಧ ರವೀಂದರ್ ಸಂಬ್ಯಾಲ್ ಅವರ ಪತ್ನಿ ನೀರು ಸಂಬ್ಯಾಲ್ ಅವರು ಲೆಫ್ಟಿನೆಂಟ್ ಆಗಿ ಬಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ...
ಸಾಂಬಾ: ದೇಶಕ್ಕಾಗಿ ಪ್ರಾಣತೆತ್ತ ಯೋಧನ ಪತ್ನಿಯೊಬ್ಬರು ಇದೀಗ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ಹುತಾತ್ಮತ ಯೋಧ ರವೀಂದರ್ ಸಂಬ್ಯಾಲ್ ಅವರ ಪತ್ನಿ ನೀರು ಸಂಬ್ಯಾಲ್ ಅವರು ಲೆಫ್ಟಿನೆಂಟ್ ಆಗಿ ಬಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ. 
ರವೀಂದರ್ ಸಂಬ್್ಯಾಲ್ ಅವರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 2015ರಲ್ಲಿ ಹುತಾತ್ಮರಾಗಿದ್ದರು. ನೀರು ಸಂಬ್ಯಾಲ್ ಅವರು 2013ರಲ್ಲಿ ರವೀಂದರ್ ಅವರನ್ನು ವಿವಾಹವಾಗಿದ್ದರು. ಪತಿ ಹುತಾತ್ಮರಾದ ವಿಚಾರ ತಿಳಿದಾಗ ನೀರು ಅವರಿಗೆ 2 ವರ್ಷದ ಪುಟ್ಟ ಮಗುವಿತ್ತು. 
ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನೀರು ಅವರು ಯಾವುದಕ್ಕೂ ಕುಗ್ಗದೆ, ತಾಯಿಯಾಗಿ ಜವಾಬ್ದಾರಿ ತೆಗೆದುಕೊಂಡು ಮುಂದುವರೆಯಲು ನಿರ್ಧರಿಸಿದ್ದರು. ಇದರಂತೆ ಪತಿಯ ಶೂ ಧರಿಸಿ ಭಾರತೀಯ ಸೇನೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದರು. ತಮ್ಮ ದೃಢ ನಿರ್ಧಾರದಂತೆ ಇದೀಗ ಸೇನೆ ಸೇರ್ಪಡೆಗೊಳ್ಳುವಲ್ಲಿ ನೀರೂ ಅವರು ಯಶಸ್ವಿಯಾಗಿದ್ದಾರೆ. 
ತಮ್ಮ ಹೋರಾಟ ಹಾಗೂ ಪರಿಶ್ರಮ, ಪ್ರೇರಣೆ ಕುರಿತಂತೆ ಪ್ರತಿಕ್ರಿಯೆ ನೀಡಿಲುವ ಲೆಫ್ಟಿನೆಂಟ್ ನೀರೂ ಅವರು, ರವೀಂದರ್ ಸಿಂಗ್ ಅವರನ್ನು 2013ರ ಏಪ್ರಿಲ್ ನಲ್ಲಿ ವಿವಾಹವಾಗಿದ್ದೆ. ಪತಿ ಹುತಾತ್ಮರಾಗಿರುವ ವಿಚಾರವನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟಕರವಾಗಿತ್ತು. ಆದರೆ, ಅವರಿಲ್ಲ ಎಂದಿ ಎಂದಿಗೂ ಯೋಚಿಸಿರಲಿಲ್. ಮಗಳಿಗೆ ತಾಯಿ-ತಂದೆ ಎರಡೂ ಆದೆ. ನನ್ನ ಮಗಳೇ ನನಗೆ ಪ್ರೇರಣೆ. 49 ವಾರಗಳ ಕಾಲ ತರಬೇತಿ ಪಡೆದುಕೊಂಡೆ. 2018ರ ಸೆಪ್ಟೆಂಬರ್ ನಲ್ಲಿ ತರಬೇತಿ ಆರಂಭಿಸಿದ್ದೆ. ಈ ವೇಳೆ ಮಾನಸಿಕವಾಗಿ ಧೈರ್ಯ ತೆಗೆದುಕೊಂಡೆ. ಸಾಕಷ್ಟು ಸಂಕಷ್ಟಗಳ, ಪರಿಶ್ರಮಗಳ ಬಳಿಕ ಕೊನೆಗೂ ಸೇನೆಗೆ ಸೇರ್ಪಡೆಗೊಂಡಿದ್ದೇನೆಂದು ಹೇಳಿದ್ದಾರೆ. 
ಮಗಳ ಯಶಸ್ಸು ಕುರಿತಂತೆ ಪ್ರತಿಕ್ರಿಯೆ ನೀಡಿರುವ ನೀರು ಅವರ ತಂದೆ ದರ್ಶನ್ ಸಿಂಗ್ ಸ್ಲಾತಿಯಾ ಅವರು, ಮಗಳ ಯಶಸ್ಸು, ಸಾಧನೆ ಕುರಿತಂತೆ ಬಹಳ ಸಂತಸವಿದೆ. ಆಕೆ ಏನೇ ಮಾಡಿದರೂ ಅದಕ್ಕೆ ಬೆಂಬಲ ನೀಡಿದ್ದೆವು. ಆಕೆಯ ಸಾಧನೆಗೆ ಆಕೆಯ ಅತ್ತೆಯ ಮನೆಯವರ ಶ್ರಮವನ್ನೂ ಪ್ರಶಂಸಿಸಬೇಕು. ಸೇನೆಗೆ ಸೇರ್ಪಡೆಗೊಳ್ಳುವುದು ನನ್ನ ಮಗಳ ಆಯ್ಕೆಯಾಗಿತ್ತು. ಆರಂಭದಲ್ಲಿ ಆಕೆಯ ನಿರ್ಧಾರ ಕಠಿಣ ಎನ್ನಿಸಿತ್ತು. ಆದರೆ, ನಂತರ ಆಕೆಗೆ ಬೆಂಬಲ ನೀಡಿದ್ದೆವು. 26 ಮಹಿಳೆಯರ ವಿರುದ್ದ ನನ್ನ ಮಗಳು ಸ್ಪರ್ಧಿಸಿದ್ದಳು. ಇದೀಗ ಯಶಸ್ಸು ಗಳಿಸಿದ್ದಾಳೆ. ಮಕ್ಕಳಿಂದ ಪೋಷಕರು ಇನ್ನೇನನ್ನು ಬಯಸಲು ಸಾಧ್ಯ? ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com