ಲೋಕಸಭಾ ಚುನಾವಣೆ: ಎಎಪಿಯಿಂದ ಯಶವಂತ ಸಿನ್ಹಾ ಕಣಕ್ಕೆ ? ಮಾತುಕತೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನವ ದೆಹಲಿ ಕ್ಷೇತ್ರದಿಂದ ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಅವರನ್ನು ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಸಲು ಮಾತುಕತೆ ನಡೆಯುತ್ತಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ

ದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನವ ದೆಹಲಿ  ಕ್ಷೇತ್ರದಿಂದ ಬಿಜೆಪಿ ಮಾಜಿ ನಾಯಕ  ಯಶವಂತ ಸಿನ್ಹಾ ಅವರನ್ನು ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಸಲು ಮಾತುಕತೆ ನಡೆಯುತ್ತಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಕಣಕ್ಕೀಳಿಸಲು ಮಾತುಕತೆ ನಡೆದಿದೆ. ಆದರೆ, ಅವರು ಬಿಹಾರದ ಪಾಟ್ನದಲ್ಲಿನ ಸಾಹಿಬ್ ಕ್ಷೇತ್ರದಿಂದ ಹೊರಬರಲು ಒಲವು ತೋರುತ್ತಿಲ್ಲ ಎಂದು ಹೇಳಿದ್ದಾರೆ.

 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಪ್ರಮುಖ ಸಂಪುಟ ಸದಸ್ಯರಾಗಿದ್ದ ಯಶವಂತ ಸಿನ್ಹಾ  ಪ್ರಧಾನಿ ನರೇಂದ್ರಮೋದಿ ಹಾಗೂ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸಿ  ಪಕ್ಷದಿಂದ ಹೊರಬಂದಿದ್ದಾರೆ.

ಯಶವಂತ ಸಿನ್ಹಾ ಅವರ ವರ್ಚಸ್ಸನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಎಎಪಿ, ನವದೆಹಲಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವ ಮೂಲಕ  ಹೆಚ್ಚಿನ ಮತ ಗಳಿಸುವ  ಉದ್ದೇಶ ಹೊಂದಿದೆ

ಇದೇ ತಿಂಗಳ ಆರಂಭದಲ್ಲಿ ನೊಯ್ಡಾದಲ್ಲಿ  ನಡೆದ ಜನಾಧಿಕಾರ ಸಮಾವೇಶದಲ್ಲಿ ಯಶವಂತ ಸಿನ್ಹಾ, ಶತ್ರುಘ್ನ ಸಿನ್ಹಾ ಅವರೊಂದಿಗೆ ಕೇಜ್ರಿವಾಲ್ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಎಎಪಿ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದರು. ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಬಿಜೆಪಿ ಬಂಡಾಯ ಸಂಸದ ಕೀರ್ತಿ ಅಜಾದ್ ಕೂಡಾ ಎಎಪಿ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಮತ್ತೊಬ್ಬರು ಹೇಳುತ್ತಾರೆ.

 2009ರ ಲೋಕಸಭಾ ಚುನಾವಣೆಯಲ್ಲಿ  ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಲ್ಲಿ  ಯಶವಂತ ಸಿನ್ಹಾ ಸೋತಿದ್ದರು.  2014ರಿಂದ ಆ ಕ್ಷೇತ್ರವನ್ನು  ಯಶವಂತ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಪ್ರತಿನಿಧಿಸುತ್ತಿದ್ದು, ಎನ್ ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com