ರಾಫೆಲ್ ವಿವಾದ: ಕಾಂಗ್ರೆಸ್ ' ಗ್ರಹಿಕೆ ಯುದ್ಧ ' ವಿರುದ್ಧ ಸರ್ಕಾರ ಹೋರಾಟ- ಸೀತಾರಾಮನ್

ರಾಫೆಲ್ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಹೀನ ಪ್ರಚಾರದ ಗ್ರಹಿಕೆಯ ಯುದ್ದ ವಿರುದ್ಧ ಸರ್ಕಾರ ಹೋರಾಟ ನಡೆಸಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ:ರಾಫೆಲ್ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್  ಮಾಡುತ್ತಿರುವ ಹೀನ ಪ್ರಚಾರದ ಗ್ರಹಿಕೆಯ ಯುದ್ದ ವಿರುದ್ಧ ಸರ್ಕಾರ ಹೋರಾಟ  ನಡೆಸಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಆಯಾಮಾಗಳಿವೆ ಎನ್ನುತ್ತಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ  ವಿರುದ್ಧ ಭ್ರಷ್ಟಾಚಾರದ ಆರೋಪಗಳು ಸತ್ಯವಲ್ಲ ಎಂದರು.

ಇದು ಗ್ರಹಿಕೆ ಯುದ್ಧದ ವಿಷಯವಾಗಿದೆ.  ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪ್ರತಿಯಾಗಿ ರಾಷ್ಟ್ರಾದ್ಯಂತ ಅಭಿಯಾನ ನಡೆಸುತ್ತೇವೆ. ನಾನೇ ಅದರ ನೇತೃತ್ವ ವಹಿಸಿಕೊಂಡು,  ವಾಸ್ತವಾಂಶವನ್ನು ಜನತೆಗೆ ತಿಳಿಸುವುದಾಗಿ ನಿರ್ಮಲಾ ಸೀತರಾಮನ್ ಹೇಳಿದರು.

ಹೆಚ್ ಎಎಲ್ ನ್ನು ಎನ್ ಡಿಎ ಸರ್ಕಾರ ದುರ್ಬಲಗೊಳಿಸಿದ ಎಂಬ ಕಾಂಗ್ರೆಸ್ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯುಪಿಎ ಅವಧಿಯಲ್ಲಿ ಹೆಚ್ ಎಎಲ್  ಸರಾಸರಿ 10 ಸಾವಿರ ಕೋಟಿ ರೂ. ಮೌಲ್ಯದ ವಾರ್ಷಿಕ ಆದೇಶಗಳನ್ನು ಪಡೆದುಕೊಳ್ಳುತಿತ್ತು. ಆದರೆ. ಎನ್ ಡಿಎ ಅವಧಿಯಲ್ಲಿ 22 ಸಾವಿರ ಕೋಟಿ ರೂ. ಮೊತ್ತದ ವಾರ್ಷಿಕ ಆದೇಶಗಳನ್ನು ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com