ಭಯಾನಕ ದೃಶ್ಯ; ಪೊಲೀಸರ ಎದುರೆ, ನಡುರಸ್ತೆಯಲ್ಲೇ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಕೊಚ್ಚಿ ಬರ್ಬರ ಕೊಲೆ!

ಕೊಲೆ ಆರೋಪಿಯೊರ್ವನನ್ನು ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನ ಅತ್ತಾಪುರದಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅತ್ತಾಪುರ(ಹೈದರಾಬಾದ್): ಕೊಲೆ ಆರೋಪಿಯೊರ್ವನನ್ನು ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನ ಅತ್ತಾಪುರದಲ್ಲಿ ನಡೆದಿದೆ. 
ಅತ್ತಾಪುರದ ನಡುರಸ್ತೆಯಲ್ಲೇ ರಮೇಶ್ ಎಂಬಾತನನ್ನು ದುಷ್ಕರ್ಮಿಯೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇನ್ನು ಜನದಟ್ಟನೆ ಪ್ರದೇಶವಾಗಿದ್ದರು. ಪೊಲೀಸರು ಎದುರಿಗಿದ್ದರು ದುಷ್ಕರ್ಮಿ ಮಾತ್ರ ರಮೇಶ್ ತಲೆಗೆ ಮಚ್ಚಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ಪೊಲೀಸರು ದುಷ್ಕರ್ಮಿಯನ್ನು ತಡೆಯಲು ಯತ್ನಿಸಿದರಾದರೂ ಅಷ್ಟರಲ್ಲಾಗಲೇ ರಮೇಶ್ ನ ಪ್ರಾಣಪಕ್ಷಿ ಹಾರಿಹೋಗಿತ್ತು. 
ಮಹೇಶ್ ಗೌಡ ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ 30 ವರ್ಷದ ರಮೇಶ್ ಕೋರ್ಟ್ ಗೆ ಹಾಜರಾಗಲು ಬಂದಿದ್ದಾಗ ರಮೇಶ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. 
ಕೊಲೆ ಮಾಡಿದ ಬಳಿಕ ದುಷ್ಕರ್ಮಿ ರಾಜೇಂದ್ರನಗರದ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com