ಸೆಕ್ಷನ್ 497ರ ಅಸಾಂವಿಧಾನಿಕ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ, ಅನೈತಿಕ ಸಂಬಂಧದ ಕುರಿತು ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾನೂನಿನ ಪ್ರಕಾರ, ಗಂಡನೇ ಎಲ್ಲದಕ್ಕೂ ಮುಖ್ಯಸ್ಥನಲ್ಲ, ಮಹಿಳೆಗೂ ಗೌರವ ತೋರಬೇಕು. ಮಹಿಳೆಯರ ಜೊತೆ ಅಗೌರವದ ವರ್ತನೆ ಸರಿಯಲ್ಲ, ಮಹಿಳೆಯರಿಗೆ ಅಗೌರವ ತೋರುವ ಕಾನೂನು ಸಾಂವಿಧಾನಿಕವಲ್ಲ ಎಂದು ದೀಪಕ್ ಮಿಶ್ರ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ ಅಭಿಪ್ರಾಯ ಪಟ್ಟಿದೆ.