ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸುಪ್ರೀಂ ಆದೇಶ :ನಿಲುವು ಸಮರ್ಥಿಸಿಕೊಂಡ ಬಿಜೆಪಿ

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ನೀಡಿರುವ ತೀರ್ಪಿನಲ್ಲಿ ನಮ್ಮ ನಿಲುವನ್ನು ಸಮರ್ಥಿಸಲಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ.
ಸಂಬೀತ್ ಪಾತ್ರ
ಸಂಬೀತ್ ಪಾತ್ರ

ನವದೆಹಲಿ:ಭೀಮಾ ಕೋರೆಗಾಂವ್   ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ನೀಡಿರುವ ತೀರ್ಪಿನಲ್ಲಿ  ನಮ್ಮ ನಿಲುವನ್ನು ಸಮರ್ಥಿಸಲಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದ್ದು, ಕಾಂಗ್ರೆಸಿಗೆ ಸೋಲಾಗಿದೆ ರಾಷ್ಟ್ರೀಯ  ಭದ್ರತೆ ವಿಚಾರದಲ್ಲಿ ಆಟವಾಡುವ ರಾಹುಲ್ ಗಾಂಧಿಗೆ ಅವಮಾನವಾಗಿದ್ದು, ಕೊರಳಿಗೆ ತಾನೇ  ತಲೆಯೊಡ್ಡುವಂತಾಗಿದೆ ಎಂದು ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಐವರು ಸಾಮಾಜಿಕ ಹೋರಾಟಗಾರರ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬಂಧನ ಕುರಿತು ತನಿಖೆ ನಡೆಸಲು  ವಿಶೇಷ ತನಿಖಾ ತಂಡ ನೇಮಕಮಾಡಲು ನಿರಾಕರಿಸಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ಇದು ದೇಶಕ್ಕೆ ಚಾರಿತ್ರಿಕ ದಿನವಾಗಿದೆ. ಸುಪ್ರೀಂ ಆದೇಶದ ಮೂಲಕ ದೇಶದ ಭದ್ರತೆ ಹಾಗೂ ಸುರಕ್ಷತೆ ವಿಚಾರದಲ್ಲಿ ಗೆಲುವಾಗಿದೆ ಎಂದರು.

ರಾಹುಲ್ ಗಾಂಧಿಗೆ ದೇಶದ ಭದ್ರತೆ ವಿಚಾರಕ್ಕಿಂತಲೂ ರಾಜಕೀಯ ಅಜೆಂಡಾವೇ ಪ್ರಮುಖವಾಗಿದೆ. ದೇಶದೊಂದಿಗೆ ಏಕೆ ನಿಲುವು ತೆಗೆದುಕೊಳ್ಳುವುದಿಲ್ಲ. ನಿಮ್ಮ ನಿಲುವು ಏಕೆ ದೇಶ ವಿರೋಧಿ ಶಕ್ತಿಗಳೊಂದಿಗಿರುತ್ತದೆ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಸಂಬೀತ್ ಪಾತ್ರ,ಕಾಂಗ್ರೆಸ್  ಪಕ್ಷದ ಮಿತ್ರ ಪಕ್ಷಗಳೇ ರಾಹುಲ್ ಗಾಂಧಿಯನ್ನು ನಾಯಕನೆಂದು ಒಪ್ಪಿಕೊಂಡಿಲ್ಲ.ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು. ಸರ್ಜಿಕಲ್ ಸ್ಟ್ರೈಕ್ ನ  ಎರಡನೇ ವಾರ್ಷಿಕೋತ್ಸವ ಅಂಗವಾಗಿ ನಾಳೆ ಬಿಜೆಪಿ ವತಿಯಿಂದ ಶೌರ್ಯ ದಿವಸ್  ಆಚರಿಸುತ್ತಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com