ರಾಫೆಲ್ ಒಪ್ಪಂದ : ಶರದ್ ಪವಾರ್ ಯಾರಿಗೂ 'ಕ್ಲೀನ್ ಚೀಟ್' ನೀಡಿಲ್ಲ- ಎನ್ ಸಿಪಿ

ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಯಾರಿಗೂ ಕ್ಲೀನ್ ಚೀಟ್ ನೀಡಿಲ್ಲ ಎಂದು ಪಕ್ಷದ ಮುಖಂಡ ಪ್ರಪುಲ್ ಪಟೇಲ್ ಹೇಳಿದ್ದಾರೆ.
ಶರದ್ ಪವಾರ್
ಶರದ್ ಪವಾರ್
Updated on: 

ಮುಂಬೈ: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಯಾರಿಗೂ ಕ್ಲೀನ್ ಚೀಟ್ ನೀಡಿಲ್ಲ ಎಂದು ಪಕ್ಷದ ಮುಖಂಡ ಪ್ರಪುಲ್ ಪಟೇಲ್ ಹೇಳಿದ್ದಾರೆ.

ರಾಫೆಲ್ ವಿಮಾನ ಖರೀದಿ ಕುರಿತಂತೆ ಶರದ್ ಪವಾರ್  ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚೀಟ್ ನೀಡಿದ್ದರಿಂದ ಅಸಮಾಧಾನಗೊಂಡು ಎನ್ ಸಿಪಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವಾರ್   ಲೋಕಸಭಾ ಸದಸ್ಯತ್ವ ಹಾಗೂ  ಎನ್ ಸಿಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಂತರ ಪಟೇಲ್ ಈ ರೀತಿ ಹೇಳಿಕೆ ನೀಡಿದ್ದಾರೆ.

 ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ವಾರ್, ರಾಫೆಲ್ ವಿಮಾನ ಖರೀದಿ ಒಪ್ಪಂದದಲ್ಲಿ ನರೇಂದ್ರ ಮೋದಿ ಅವರ ಉದ್ದೇಶಗಳು ತಪ್ಪಿನಿಂದ ಕೂಡಿಲ್ಲ ಎಂದು ಶರದ್ ಪವಾರ್ ಕಳೆದ ವಾರ ಮರಾಠಿ ನ್ಯೂಸ್ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನ ತಮ್ಮಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಶರದ್ ಪವಾರ್ ಯಾರಿಗೂ ಕ್ಲೀನ್  ಚೀಟ್ ನೀಡಿಲ್ಲ. ರಾಫೆಲ್ ಜೆಟ್ ವಿಮಾನದ ಖರೀದಿಯ ಬೆಲೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗೂ ಜಂಟಿ ಪಾರ್ಲಿಮೆಂಟರಿ ಸಮಿತಿಯಿಂದ ತನಿಖೆ ನಡೆಸುವಂತೆ ಎನ್ ಸಿಪಿ ಒತ್ತಾಯಿಸುತ್ತದೆ ಎಂದು ಪ್ರಪುಲ್  ಪಟೇಲ್ ಹೇಳಿದ್ದಾರೆ.

 ಈ ಮಧ್ಯೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ, ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪವಾರ್ ಕೇಳಿದ ಮೂರು ಪ್ರಮುಖ ಪ್ರಶ್ನೆಗಳನ್ನು ಜನರು ಕೇಳದಿರುವುದು ಬೇಸರ ಮೂಡಿಸಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com