ತಾಳ್ಮೆ ವಿಚಾರಕ್ಕೆ ಬಂದರೆ ನಾನೂ ಧೋನಿ ತರಹ: ರೋಹಿತ್ ಶರ್ಮಾ

ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು...
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ದುಬೈ: ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹಲವು ಆಟಗಾರರಿಗೆ ಸ್ಪೂರ್ತಿಯಾಗಿದ್ದು, ತನ್ನ ನಾಯಕತ್ವದಲ್ಲಿ ಏಷ್ಯಾ ಕಪ್ ಗೆದ್ದ ರೋಹಿತ್ ಶರ್ಮಾ ಅವರು ಸಹ ಧೋನಿಯ ತಾಳ್ಮೆಯನ್ನು ಪ್ರದರ್ಶಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬಲಗೈ ಓಪನರ್ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ ರೀತಿಯು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಅತಿ ಒತ್ತಡದ ಸನ್ನಿವೇಶದಲ್ಲೂ ಅತಿರೇಕಕ್ಕೊಳಗಾಗದೆ ತಾಳ್ಮೆಯ ನಾಯಕತ್ವ ಪ್ರದರ್ಶಿಸಿರುವ ರೋಹಿತ್ ಮಾದರಿಯಾಗಿದ್ದಾರೆ. 
ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸಹ ರೋಹಿತ್ ಶರ್ಮಾ ತಾಳ್ಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಾಜಿ ನಾಯಕನ ಗುಣಗಳನ್ನು ರೋಹಿತ್ ಪಾಲಿಸಿದ್ದಾರೆ ಎಂದು ಹೇಳಿದ್ದಾರೆ.
ನಾನು ಹಲವು ವರ್ಷಗಳಿಂದ ಧೋನಿ ಅವರನ್ನು ನೋಡಿದ್ದೇನೆ, ಅವರು ಯಾವತ್ತೂ ಆತಂಕಕ್ಕೆ ಒಳಗಾಗಿಲ್ಲ. ನಿರ್ಧಾರ ತೆಗೆದುಕೊಳ್ಳುವಾಗ ಸಮಯ ತೆಗೆದುಕೊಂಡಿದ್ದಾರೆ. ನನ್ನಲ್ಲೂ ಅವರ ಗುಣಗಳಿವೆ ಎಂದು ರೋಹಿತ್ ಶರ್ಮಾ ವರದಿಗಾರರಿಗೆ ತಿಳಿಸಿದ್ದಾರೆ.
ನಾನು ಧೋನಿ ನಾಯಕತ್ವದಲ್ಲಿ ಹಲವು ವರ್ಷ ಆಟವಾಡಿದ್ದೇನೆ. ಏನಾದರೂ ಇದ್ದಾಗ ಅವರು ಸಲಹೆ ನೀಡುತ್ತಾರೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಸಹ ಮೊದಲು ವಿಚಾರ ಮಾಡಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.
ನಿಜಕ್ಕೂ ಧೋನಿ ಎವರ್ ಗ್ರೀನ್ ನಾಯಕ.. ಅವರ ನಾಯಕತ್ವದಲ್ಲಿ ನಾನು ಸಾಕಷ್ಟು ವರ್ಷ ಆಡಿದ್ದೇನೆ. ಸಾಕಷ್ಚು ವರ್ಷಗಳಿಂದ ಅವರ ನಾಯಕತ್ವವನ್ನು ನೋಡಿದ್ದೇನೆ. ನಿಜಕ್ಕೂ ಅವರು ಸ್ಪೂರ್ತಿದಾಯಕ ಆಟಗಾರ. ಇಡೀ ಟೂರ್ನಿಯಲ್ಲಿ ತಂಡಕ್ಕೆ ಅವರ ಪಾತ್ರ ಅತ್ಯಂತ ದೊಡ್ಡದು. ಧೋನಿ ಎಂತಹುದೇ ಪರಿಸ್ಥಿತಿ ಇದ್ದರೂ ಸೂಕ್ತ ಸಲಹೆ ನೀಡಿ ನಮ್ಮ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದರು. ನಿರ್ಧಾರ ಕೈಗೊಳ್ಳುವಾಗ ಅವರು ಒತ್ತಡಕ್ಕೆ ಒಳಗಾಗುವುದಿಲ್ಲ ಮತ್ತು ಸಾಕಷ್ಚು ಯೋಚಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇನ್ನು ಕ್ರಿಕೆಟ್ ಪಂಡಿತರ ಪ್ರಕಾರ ವಿರಾಟ್ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆಕ್ರಮಣಕಾರಿ ನಾಯಕತ್ವ ಮೈಗೂಡಿಸಿದ್ದರೆ, ಅತ್ತ ರೋಹಿತ್ ಶರ್ಮಾ ಧೋನಿ ಶೈಲಿಯ ನಾಯಕತ್ವವನ್ನು ಅನುಸರಿಸುತ್ತಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com