ಮೋದಿ ಜನಪ್ರಿಯತೆ ಕಂಡು ಕೇಜ್ರಿವಾಲ್ ಯಾವುದೇ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ: ಅಮಿತ್ ಶಾ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನಪ್ರಿಯತೆಯನ್ನು ಕಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಯಾವುದೇ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನಪ್ರಿಯತೆಯನ್ನು ಕಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಯಾವುದೇ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ. 
ಕೇಂದ್ರೀಯ ದೆಹಲಿಯ ಕರೋಲ್ ಬಾಘ್ ಪ್ರದೇಶದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 
ಕೆಟ್ಟ ರಾಜಕೀಯ ಮಾಡುವ ಮೂಲಕ ಕೇಜ್ರಿವಾಲ್ ಸರ್ಕಾರ ದೆಹಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುವಂತೆ ಮಾಡುತ್ತಿದೆ. ದೆಹಲಿ ಸರ್ಕಾರ ಅಸಹಕಾರ ಚಳುವಳಿಯನ್ನು ಆರಂಭಿಸಿತ್ತು. ಮಹಾತ್ಮಗಾಂಧಿಯಿಂದ ಅವರು ಪ್ರೇರಣೆ ಪಡೆದುಕೊಂಡಿರಬಹುದು ಆದರೆ, ಅವರಿಗೆ ಇದು ಬ್ರಿಟೀಷರ ಸರ್ಕಾರವಲ್ಲ, ದೇಶಪ್ರೇಮಿ ಮೋದಿ ಸರ್ಕಾರ ಕೇಂದ್ರದಲ್ಲಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. 
ಆಯುಷ್ಮಾನ್ ಭಾರತ್ ಯೋಜನೆ ನಗರದಲ್ಲಿ ಜಾರಿಗೊಳಿಸು ಸಾಧ್ಯವಾಗಿಲ್ಲವೇಕೆ? ಅದಕ್ಕೆ ಕಾರಣವೇನು?... ದೆಹಲಿಯ ಒಂದೂವರೆ ಕೋಟಿ ಜವರು ಆರೋಗ್ಯ ಸೇವೆ ಯೋಜನೆಯ ಲಾಭದಿಂದ ವಂಚಿರಾಗುವಂತೆ ಕೇಜ್ರಿವಾಲ್ ಮಾಡಿದ್ದಾರೆ. ಕೇಜ್ರಿವಾಲ್ ವೋಟ್ ಬ್ಯಾಂಕ್ ನಿಂದಾಗಿ ಜನರಿಗೆ ಯೋಜನೆಯ ಲಾಭ ತಲುಪುತ್ತಿಲ್ಲ. 
ಮೊಹಲ್ಲಾ ಕ್ಲಿನಿಕ್ ಗಳನ್ನು ತೆರೆದಿದ್ದೇವೆಂದು ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ, ಆ ಕ್ಲಿನಿಕ್ ಗಳು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ, ಹೃದಯಕ್ಕೆ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತವೆಯೇ? ಕೇಜ್ರಿವಾಲ್ ಮೊದಲು ಮೊಹಲ್ಲಾದಲ್ಲಿ ಚಿಕಿತ್ಸೆ ಪಡೆದುಕೊಂಡು ನೋಡಬೇಕು. ನಂತರವಷ್ಟೇ ಅವರಿಗೆ ನೈಜತೆ ತಿಳಿಯಲಿದೆ. 2019ರ ಚುನಾವಣೆಯಲ್ಲಿ ಜನತೆ ಕೇಜ್ರಿವಾಲ್ ಅವರಿಗೆ ಬುದ್ಧಿ ಕಲಿಸಲಿದೆ. ಆಗ ನೀವು ಇವಿಎಂ ನಲ್ಲಿ ದೋಷವಿದೆ ಎಂದು ದೂಷಿಸುವಂತಿಲ್ಲ ಎಂದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com