ಗಡಿಯಲ್ಲಿ ಮತ್ತೆ ಪಾಕ್ ಸೇನೆಯ ಉದ್ಧಟತನ, ಭಾರತೀಯ ಗಡಿಯೊಳಗೆ ಪಾಕ್ ಹೆಲಿಕಾಪ್ಟರ್ ಹಾರಾಟ

ಅತ್ತ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಪ್ರತಿನಿಧಿಗಳ ವಾಕ್ಸಮರ ಮುಂದುವರೆದಿರುವಂತೆಯೇ ಇತ್ತ ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ತನ್ನ ಉದ್ಧಟತನ ಮುಂದುವರೆಸಿದೆ.
ಗಡಿಯಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್
ಗಡಿಯಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್
ಶ್ರೀನಗರ: ಅತ್ತ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಪ್ರತಿನಿಧಿಗಳ ವಾಕ್ಸಮರ ಮುಂದುವರೆದಿರುವಂತೆಯೇ ಇತ್ತ ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ತನ್ನ ಉದ್ಧಟತನ ಮುಂದುವರೆಸಿದೆ.
ಕಾಶ್ಮೀರದ ಪೂಂಚ್ ಜಿಲ್ಲೆಯ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನಿ ಸೇನೆಯ ಹೆಲಿಕಾಪ್ಟರ್ ನಿಯಮ ಉಲ್ಲಂಘಿಸಿ ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದೆ. ಈ ಬಗ್ಗೆ ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದ್ದು, ಬಿಳಿ ಬಣ್ಣದ ಹೆಲಿಕಾಪ್ಟರ್ ಪೂಚ್ ಜಿಲ್ಲೆಯ ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದ್ದಲ್ಲದೇ ಸೈನಿಕರ ಚಲನವಲನದ ಮೇಲೆ ಕಣ್ಣಿರಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಬಗ್ಗೆ ಪಾಕಿಸ್ತಾನಿ ರೇಂಜರ್ಸ್ ಅಧಿಕಾರಿಗಳ ಬಳಿ ದೂರು ನೀಡಲು ಸೇನೆ ನಿರ್ಧರಿಸಿದೆ. ಅಲ್ಲದೆ ಘಟನೆ ಕುರಿತಂತೆ ಸೇನೆ ಗಂಭೀರ ಆಕ್ಷೇಪ ವ್ಯಕ್ತಪಿಸಿದೆ.
ಇಂದು ಬೆಳಗ್ಗೆಯಷ್ಟೇ ಪ್ರಧಾನಿ ಮೋದಿ ತಮ್ಮ ವಾರದ ಮನ್ ಕಿ ಬಾತ್ ನಲ್ಲಿ ಸೇನೆ ಮತ್ತು ಗಡಿ ಭದ್ರತೆ ಕುರಿತಂತೆ ಮಾತನಾಡಿದ್ದರು. ಆದರೆ ಈ ಹೇಳಿಕೆ ಬೆನ್ನಲ್ಲೇ ಗಡಿಯಲ್ಲಿ ಸೇನಾ ಹೆಲಿಕಾಪ್ಟರ್ ಹಾರಿಸುವ ಮೂಲಕ ಪಾಕ್ ಸೇನೆ ಉದ್ಧಟತನದ ಪ್ರದರ್ಶನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com